ವ್ಯಾಟಿಕನ್‌ ಸಿಟಿ (ಸೆ. 02):  ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ವಿದ್ಯುತ್‌ ವ್ಯತ್ಯಯದಿಂದಾಗಿ 25 ನಿಮಿಷಗಳ ಕಾಲ ಲಿಫ್ಟ್‌ನಲ್ಲೇ ಸಿಕ್ಕಿಹಾಕಿಕೊಂಡಿದ್ದ ಆತಂಕಕಾರಿ ಘಟನೆ ನಡೆದಿದೆ.

ಸಾಯಂಕಾಲದ ಪ್ರಾರ್ಥನೆಗೆಂದು ಪೋಪ್‌ ಫ್ರಾನ್ಸಿಸ್‌ ಅವರು ಲಿಫ್ಟ್‌ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಅವರು 25 ನಿಮಿಷಗಳ ಅದರಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಪೋಪ್‌ ಅವರನ್ನು ರಕ್ಷಿಸಿದರು.

ಈ ಘಟನೆಯಿಂದಾಗಿ ಪೋಪ್‌ ಅವರು ಭಾನುವಾರದ ಪ್ರಾರ್ಥನೆಗೆ ಪೂರ್ವನಿಗದಿಯಾದ ಸಮಯಕ್ಕಿಂತ 7 ನಿಮಿಷ ತಡವಾಗಿ ಆಗಮಿಸಿದರು. ಈ ಸಂಬಂಧ ಅವರು ಸಾರ್ವಜನಿಕರಲ್ಲೇ ಕ್ಷಮೆಯಾಚಿಸಿದರು.