ಪದೇ ಪದೇ ಅಪಘಾತಕ್ಕೆ ಕಂಗೆಟ್ಟ ಜನ; ನಿಯಂತ್ರಣಕ್ಕೆ ಹೋಮ ಹವನ

First Published 31, Jan 2018, 11:18 AM IST
Pooja for Control Accident
Highlights

ಪದೇ ಪದೇ ಅಪಘಾತ​​ ಹೆಚ್ಚಾಗುತ್ತಿರುವುದನ್ನು ಮನಗಂಡ ಗ್ರಾಮಸ್ಥರು ರಸ್ತೆಯಲ್ಲೇ ಹೋಮ ಹವನ ನಡೆಸಿ ದೇವರ ಮೊರೆ ಹೋಗಿದ್ದಾರೆ.

ತುಮಕೂರು (ಜ.31): ಪದೇ ಪದೇ ಅಪಘಾತ​​ ಹೆಚ್ಚಾಗುತ್ತಿರುವುದನ್ನು ಮನಗಂಡ ಗ್ರಾಮಸ್ಥರು ರಸ್ತೆಯಲ್ಲೇ ಹೋಮ ಹವನ ನಡೆಸಿ ದೇವರ ಮೊರೆ ಹೋಗಿದ್ದಾರೆ.

ಮಧುಗಿರಿ ತಾಲೂಕಿನ ಹೊಸಕೆರೆಯ ಗಿರಿಯಮ್ಮನ ಪಾಳ್ಯದಲ್ಲಿ ಗ್ರಾಮಸ್ಥರು ಹೋಮ ನಡೆಸಿ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಪಾವಗಡ-ಮಳವಳ್ಳಿ ರಸ್ತೆಯ ಗಿರಿಯಮ್ಮನ ಪಾಳ್ಯ, ಪಡಸಾಲಹಟ್ಟಿ, ಹೊಸಕೆರೆ ಕೆರೆಯ ಭಾಗದವರೆಗೂ ನಿರಂತರವಾಗಿ ಅಪಘಾತ ನಡೆಯುತ್ತಿತ್ತು. ಪರಿಣಾಮ ಕಳೆದ ಎರಡು ತಿಂಗಳಲ್ಲಿ 9 ಜನರು ಸಾವನಪ್ಪಿದ್ದಾರೆ. ಬಹುತೇಕ ಸ್ಥಳೀಯರೇ‌ ಅಸುನೀಗಿದ್ದಾರೆ. ಇದರಿಂದ ಆತಂಕಗೊಳಗಾದ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಯಾವುದೇ ಅಪಘಾತಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೂ ವೇದ ಬ್ರಹ್ಮ ನಾಗರಾಜ ಶಾಸ್ತ್ರಿಗಳ ನೇತೃತ್ವದಲ್ಲಿ 6 ನಾನಾ ಹೋಮ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ಗ್ರಾಮಸ್ಥರಿಂದ ಚಂದಾರೂಪದಲ್ಲಿ ಹಣ ಸಂಗ್ರಹಿಸಿ ಈ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದಾರೆ.

loader