ಆಸ್ಪತ್ರೆಯಲ್ಲಿ ಇದೀಗ ಚಿಂತಾಜನಕವಾಗಿ ಮಲಗಿರುವ ಪೊಲೀಸ್ ಕಾನ್ಸ್​ಟೇಬಲ್ ರಮೇಶ್. ಯಲಹಂಕ ಸಂಚಾರಿ ಠಾಣೆಯ ಪೇದೆ ರಮೇಶ್ ನಿನ್ನೆ ಸಂಜೆ ಏಳುವರೆ ಸುಮಾರಿಗೆ  ಬೆಂಗಳೂರಿನ ಯಲಹಂಕದ ಏರ್​ಪೋರ್ಟ್​ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದರು. ಗವರ್ನರ್ ವಾಹನಕ್ಕೆ ಟ್ರಾಫಿಕ್ ಕ್ಲೀಯರ್ ಮಾಡಿಕೊಡುವ ಕರ್ತವ್ಯದಲ್ಲಿ ನಿರತರಾಗಿದ್ದಾಗ ಏಕಾಏಕಿ ಬೈಕೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪೇದೆ ರಮೇಶ್ ತೆಲೆಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ  ತುರ್ತು ಚಿಕಿತ್ಸೆ ನೀಡಿ, ಅಲ್ಲಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಲಾಗಿದೆ.

ಬೆಂಗಳೂರು(ಜ.15): ನಿನ್ನೆ ಸಂಕ್ರಾಂತಿ ಹಬ್ಬ. ಈ ಹಬ್ಬವನ್ನೂ ಮರೆತು ಆತ ಸರ್ಕಾರಿ ಸೇವೆಯಲ್ಲಿ ತೊಡಗಿದ್ದ. ಗವರ್ನರ್ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಕರ್ತವ್ಯದಲ್ಲಿ ನಿರತನಾಗಿದ್ದ ಪೇದೆ ಇದೀಗ ಆಸ್ಪತ್ರೆ ಸೇರಿದ್ದಾನೆ.

ಆಸ್ಪತ್ರೆಯಲ್ಲಿ ಇದೀಗ ಚಿಂತಾಜನಕವಾಗಿ ಮಲಗಿರುವ ಪೊಲೀಸ್ ಕಾನ್ಸ್​ಟೇಬಲ್ ರಮೇಶ್. ಯಲಹಂಕ ಸಂಚಾರಿ ಠಾಣೆಯ ಪೇದೆ ರಮೇಶ್ ನಿನ್ನೆ ಸಂಜೆ ಏಳುವರೆ ಸುಮಾರಿಗೆ ಬೆಂಗಳೂರಿನ ಯಲಹಂಕದ ಏರ್​ಪೋರ್ಟ್​ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದರು. ಗವರ್ನರ್ ವಾಹನಕ್ಕೆ ಟ್ರಾಫಿಕ್ ಕ್ಲೀಯರ್ ಮಾಡಿಕೊಡುವ ಕರ್ತವ್ಯದಲ್ಲಿ ನಿರತರಾಗಿದ್ದಾಗ ಏಕಾಏಕಿ ಬೈಕೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪೇದೆ ರಮೇಶ್ ತೆಲೆಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಅಲ್ಲಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಲಾಗಿದೆ.

ಇನ್ನು ಪೇದೆ ರಮೇಶ್ ಗೆ ಅಪಘಾತ ಮಾಡಿದ ರಾಜು ಕೂಡ ಗಾಯಗೊಂಡಿದ್ದು ಆತನನ್ನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಆರಂಭದಲ್ಲಿ ಗವರ್ನರ್ ಬೆಂಗಾವಲು ವಾಹನವೇ ಪೇದೆಗೆ ಡಿಕ್ಕಿ ಹೊಡೆದಿದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಬೈಕ್ ಸವಾರ ಡಿಕ್ಕಿಹೊಡೆದಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ.

ಇನ್ನು ಪೇದೆ ರಮೇಶ್ ಆರೋಗ್ಯದ ಬಗ್ಗೆ 12 ಘಂಟೆಯ ವರೆಗೂ ಏನೂ ಹೇಳೋದಕ್ಕೆ ಸಾಧ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಕೂಡ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ. ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.