ಶ್ರೀನಿವಾಸ್‌ಗೆ ವಿರೋಧಿಗಳು ಹೆಚ್ಚು. ಇವರಲ್ಲಿ ಕೆಲವರು ರಾಜಕೀಯವಾಗಿ ಪ್ರಭಾ ವಿಗಳಾಗಿದ್ದು, ಯಾವ ಕಾರಣಕ್ಕೆ ಕೊಲೆ ಯತ್ನ ನಡೆದಿದೆ ಎಂಬುದು ಖಚಿತವಾಗಿಲ್ಲ. ಕೊಲೆಗೆ ಹೊರ ರಾಜ್ಯದವರಿಗೆ ಸುಪಾರಿ ಕೊಟ್ಟಿದ್ದರು ಎಂಬುದು ತನಿಖೆಯಲ್ಲಿ ಗೊತಾಗಿದೆ.
ಬೆಂಗಳೂರು (ಫೆ.06): ಶುಕ್ರವಾರ ನಡೆದಿದ್ದ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೆ ಪ್ರಭಾವಿ ಶಕ್ತಿಗಳು ಸುಪಾರಿ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಈಶಾನ್ಯ ವಿಭಾಗದ ಪೊಲೀಸರ ಪ್ರಾಥಮಿಕ ಹಂತದ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರ ಎದುರಾಳಿ ರೌಡಿ ಗುಂಪುಗಳಾದ ಭವಾನಿ ಶಂಕರ, ಕಾಮಾಕ್ಷಿಪಾಳ್ಯದ ಮಚ್ಚಾ ಹಾಗೂ ಬೆತ್ತನಗೆರೆ ಸೀನನ ಸಹಚರರು ಸೇರಿದಂತೆ 150ಕ್ಕೂ ಅಧಿಕ ರೌಡಿಗಳನ್ನು ಠಾಣೆಗೆ ಕರೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಶ್ರೀನಿವಾಸ್ ಸಹಚರ ಮಾಚೋಳ್ಳಿ ಲೋಕಿ ಎಂಬಾತನನ್ನು ಪೊಲೀಸರು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀನಿವಾಸ್ಗೆ ವಿರೋಧಿಗಳು ಹೆಚ್ಚು. ಇವರಲ್ಲಿ ಕೆಲವರು ರಾಜಕೀಯವಾಗಿ ಪ್ರಭಾ ವಿಗಳಾಗಿದ್ದು, ಯಾವ ಕಾರಣಕ್ಕೆ ಕೊಲೆ ಯತ್ನ ನಡೆದಿದೆ ಎಂಬುದು ಖಚಿತವಾಗಿಲ್ಲ. ಕೊಲೆಗೆ ಹೊರ ರಾಜ್ಯದವರಿಗೆ ಸುಪಾರಿ ಕೊಟ್ಟಿದ್ದರು ಎಂಬುದು ತನಿಖೆಯಲ್ಲಿ ಗೊತಾಗಿದೆ.
