ಪೊಲೀಸ್ ಠಾಣೆಯೊಂದು ಗ್ರಾಮಸ್ಥರ ಆಕ್ರೋಶಕ್ಕೆ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬನನ್ನು ಲಾಕಪ್ ಡೆತ್ ಮಾಡಿದ್ದಾರೆಂಬ ಶಂಕೆಯ ಮೇಲೆ ಆಕ್ರೋಶಿತರಾದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು   ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

ಗದಗ(ಫೆ.05): ಪೊಲೀಸ್ ಠಾಣೆಯೊಂದು ಗ್ರಾಮಸ್ಥರ ಆಕ್ರೋಶಕ್ಕೆ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬನನ್ನು ಲಾಕಪ್ ಡೆತ್ ಮಾಡಿದ್ದಾರೆಂಬ ಶಂಕೆಯ ಮೇಲೆ ಆಕ್ರೋಶಿತರಾದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

ಇಂತಹುದೊಂದು ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಕಳೆದ ರಾತ್ರಿ ಅಕ್ರಮವಾಗಿ ಮರಳು ಸಾಗಾಣಿಕೆ ದಾಳಿ ನಡೆದಿದ್ದು, ಈ ವೇಳೆ ಲಾರಿ ಚಾಲಕ ಶಿವಪ್ಪ ಗಾನಗೇರ ಎಂಬ ವ್ಯಕ್ತಿಯನ್ನು ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆಗೆಂದು ಕರೆ ತಂದಿದ್ದರು. ಆದರೆ ವಿಚಾರಣೆ ವೇಳೆ ವ್ಯಕ್ತಿ ಸಾವನ್ನಪ್ಪಿದ್ದಾನೆ.

ವಿಚಾರಣೆ ವೇಳೆ ಪೊಲೀಸರೇ ಆರೋಪಿಯ ಮೇಲೆ ಹಲ್ಲೆ ನಡೆಸಿ ಲಾಕಪ್ ಡೆತ್ ಮಾಡಿದ್ದಾರೆ ಎಂದು ಆಕ್ರೋಶಿತರಾದ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮಸ್ಥರು ಮತ್ತು ಮೃತನ ಕುಟುಂಬದವರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ವಾಹನ, ಬೈಕ್ಗಳನ್ನು ಸುಟ್ಟು ಕರಕಲಾಗಿವೆ.ಅಲ್ಲದೇ ಇನ್ನು ಠಾಣೆ ಮುಂದೆ ಮೃತನ ಶವ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.

ಜನರ ಈ ಆಕ್ರೋಶ ಕಂಡು ಪೊಲೀಸರು ಪರಾರಿಯಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.