ಕಾರ್ತಿಕ್ ಅತ್ಯಾಚಾರ ಪ್ರಕರಣ ಸೇರಿದಂತೆ ಮುಂತಾದ ಪ್ರಕರಣಗಳ ಆರೋಪಿಯಾಗಿದ್ದು, 7 ವರ್ಷಗಳ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆ ಹೊಂದಿದ್ದ.
ಬೆಂಗಳೂರು(ಅ.15): ಪೊಲೀಸ್ ಪೇದೆ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ರೌಡಿ ಶೀಟರ್ ಕಾರ್ತಿಕ್ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ವಶಕ್ಕೆ ಪಡೆದ ಘಟನೆ ಹಲಸೂರು ಕೆರೆ ಸಮೀಪದ ಗುರುದ್ವಾರದಲ್ಲಿ ನಡೆದಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸಿ ಹೊರಬಂದಿದ್ದ ರೌಡಿ ಶೀಟರ್ ಕಾರ್ತಿಕ್, ರಾತ್ರಿವೇಳೆ ಗಸ್ತು ತಿರುಗುತ್ತಿದ್ದ ಪೇದೆ ಬಸವರಾಜ್'ಗೆ ಡ್ರ್ಯಾಗರ್'ನಿಂದ ಚುಚ್ಚಿದ್ದಾನೆ. ತಕ್ಷಣ ಬಸವರಾಜ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆ ಬಳಿಕ ಕಾರ್ಯ ಪ್ರವೃತ್ತರಾದ ಹಲಸೂರು ಪೊಲೀಸ್ ಠಾಣೆಯ ಸಬ್'ಇನ್ಸ್'ಪೆಕ್ಟರ್ ಸುಬ್ರಮಣ್ಯ ಮತ್ತವರ ತಂಡ ಹುಡುಕಾಟ ನಡೆಸಿದೆ. ಈ ವೇಳೆ ಸಬ್'ಇನ್ಸ್'ಪೆಕ್ಟರ್ ಮೇಲೂ ಕಾರ್ತಿಕ್ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸಬ್'ಇನ್ಸ್'ಪೆಕ್ಟರ್ ಸುಬ್ರಮಣ್ಯ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಕಾರ್ತಿಕ್ ಬಲಗಾಲಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ತಿಕ್ ಅತ್ಯಾಚಾರ ಪ್ರಕರಣ ಸೇರಿದಂತೆ ಮುಂತಾದ ಪ್ರಕರಣಗಳ ಆರೋಪಿಯಾಗಿದ್ದು, 7 ವರ್ಷಗಳ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆ ಹೊಂದಿದ್ದ.
