ಅತ್ಯಾಚಾರ ಪ್ರಕರಣಗಳ ದೋಷಿ ಬಾಬಾ ರಾಮ್ ರಹೀಮ್ ಸಿಂಗ್ 20 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಇಬ್ಬರು ಸಾಧ್ವಿಗಳನ್ನ ರೇಪ್ ಮಾಡಿದ ಅಪರಾಧಕ್ಕಾಗಿ ಬಾಬಾಗೆ ತಲಾ 10 ವರ್ಷ ಶಿಕ್ಷೆ ವಿಧಿಸಲಾಗಿದೆ.
ಸಿರ್ಸಾ(ಆ.29): ಪೊಲೀಸರು ಇಂದು ಡೇರಾ ಸಚ್ಚಾ ಸೌಧದಲ್ಲಿರುವ ಬಾಬಾ ರಾಮ್'ರಹೀಂ ಮನೆ ಮೇಲೆ ದಾಳಿ ನಡೆಸಿದ್ದು, ಕಣ್ಣಿಗೆ ಕಂಡಿದ್ದೆಲ್ಲ ಐಶಾರಾಮಿ ವಸ್ತುಗಳ ಪತ್ತೆಯಾಗಿವೆ. ಮನೆಯಲ್ಲಿ ಬಂಗಾರ ಲೇಪಿತ ಸಿಂಹಾಸನ, ಮಂಚ ಸೇರಿದಂತೆ ಹಲವು ವಸ್ತುಗಳು ಬಂಗಾರ ಲೇಪಿತದಿಂದ ತಯಾರಿಸಲಾಗಿದೆ.
ಅತ್ಯಾಚಾರ ಪ್ರಕರಣಗಳ ದೋಷಿ ಬಾಬಾ ರಾಮ್ ರಹೀಮ್ ಸಿಂಗ್ 20 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಇಬ್ಬರು ಸಾಧ್ವಿಗಳನ್ನ ರೇಪ್ ಮಾಡಿದ ಅಪರಾಧಕ್ಕಾಗಿ ಬಾಬಾಗೆ ತಲಾ 10 ವರ್ಷ ಶಿಕ್ಷೆ ವಿಧಿಸಲಾಗಿದೆ. ಸಿಬಿಐ ವಿಶೇಷ ಕೋರ್ಟ್'ನ ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರು ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ರಾಮ್ ರಹೀಮ್ ಸಿಂಗ್'ಗೆ 10 ವರ್ಷದ ಎರಡು ಅವಧಿಯ ಕಠಿಣ ಕಾರಾಗೃಹವಾಸದ ಶಿಕ್ಷೆ ಹಾಗೂ 65 ಸಾವಿರ ರೂ ದಂಡ ವಿಧಿಸಿದರು. ಅತ್ಯಾಚಾರ ಎಸಗಿದ್ದಕ್ಕೆ 50 ಸಾವಿರ ರೂ, ಕೊಲೆಯತ್ನಕ್ಕಾಗಿ 10 ಸಾವಿರ ರೂ ಹಾಗೂ ಬೆದರಿಕೆಗಾಗಿ 5 ಸಾವಿರ ರೂ ದಂಡ ವಿಧಿಸಿದರು.
