ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು. ಮೇ 7 ರಂದು ದಾಳಿ ನಡೆದಿತ್ತು.
ಬೆಂಗಳೂರು(ಮೇ 09): ಸಿಸಿಬಿ ಪೊಲೀಸರು ಹುಕ್ಕಾ ಬಾರ್ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಓರ್ವ ನಟ ಸೇರಿ 6 ಮಂದಿಯನ್ನು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತರಲ್ಲಿ ಚಿತ್ರನಟ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು'ನಲ್ಲಿ ಸ್ಪರ್ಧಿಸಿದ್ದ ನಟ ಅರುಣ್ ಗೌಡ ಸಹ ಸೇರಿದ್ದಾರೆನ್ನಲಾಗಿದೆ. ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು. ಮೇ 7 ರಂದು ದಾಳಿ ನಡೆದಿತ್ತು.
ನಟ ಅರುಣ್ ಗೌಡ(ಅರು ಗೌಡ ಎಂದೂ ಖ್ಯಾತ) ಅವರು "ಮುದ್ದು ಮನಸೇ", "ನಾನು ನಮ್ ಹುಡ್ಗಿ" ಸಿನಿಮಾಗಳಲ್ಲಿ ನಾಯಕನಟನಾಗಿದ್ದಾರೆ.
