ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಪ್ರಕರಣದ ನಂತರ ಬಳ್ಳಾರಿ ಜೈಲೂ ಸಹ ಸಾಕಷ್ಟೂ ಸುದ್ದಿಯಾಗಿತ್ತು.
ಬಳ್ಳಾರಿ(ಅ.13): ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ 70 ಕ್ಕೂ ಹೆಚ್ಚು ಪೊಲೀಸರು ಜೈಲಿನಲ್ಲಿ ಕೈದಿಗಳು ಬಳಸುತ್ತಿದ್ದ ಗಾಂಜಾ, ಮೊಬೈಲ್ ಸಿಮ್ ಕಾರ್ಡ್'ಗಳನ್ನು ವಶಪಡಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಎಸ್ಪಿ ಆರ್ ಚೇತನ್ ಅವರು ಇಂದು ಮುಂಜಾನೆ 11 ಗಂಟೆಗೆ ಎಸ್ಪಿ,ಇಬ್ಬರು ಡಿವೈಎಸ್ಪಿ, 8 ಪಿಎಸ್ಐ, 70 ಪೊಲೀಸ್ ಪೇದೆಗಳು, ಶ್ವಾನದಳದ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು. ಒಂದು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.
ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಪ್ರಕರಣದ ನಂತರ ಬಳ್ಳಾರಿ ಜೈಲೂ ಸಹ ಸಾಕಷ್ಟೂ ಸುದ್ದಿಯಾಗಿತ್ತು. ಹೀಗಾಗಿ ಪೊಲೀಸರು ಇಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
