ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಗೈರು ಹಾಜರು | ಅಂಬಿ ಅಭಿಮಾನಿಗಳ ಆಕ್ರೋಶ | ರಮ್ಯಾ ಮನೆಗೆ ಪೊಲೀಸ್ ರಕ್ಷಣೆ 

ಮಂಡ್ಯ (ನ. 28): ಅಂಬಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳದ ಮಾಜಿ ಸಂಸದೆ ರಮ್ಯಾ ವಿರುದ್ಧ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಫೋಟೋ ಹಾಕಿ ಅಣಕಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ನಿವಾಸಕ್ಕೆ ಪೊಲೀಸ್ ರಕ್ಷಣೆ ನೀಡಲಾಗಿದೆ. ನಿವಾಸದ ಮುಂದೆ ಪೇದೆಗಳನ್ನು ನಿಯೋಜಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ರಮ್ಯಾಗಿದೆಯಾ ಆಸ್ಟಿಯೋಕ್ಲ್ಯಾಟೋಮಾ?: ಏನಿದು ರೋಗ?

ಒಂದು ತಿಂಗಳ ಹಿಂದೆ ರಮ್ಯಾ ತಮ್ಮ ಕಾಲಿನ ಅನಾರೋಗ್ಯದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಕಾಲಿನಲ್ಲಿ ದುರ್ಮಾಂಸದ ಬೃಹತ್ ಗೆಡ್ಡೆ ಬೆಳೆದಿದ್ದು ನಡೆಯಲು ಕಷ್ಟವಾಗುತ್ತಿದೆ ಎನ್ನಲಾಗಿದೆ. ಅನಾರೋಗ್ಯದಿಂದ ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಗೈರು ಹಾಜರಾಗಿದ್ದರು ಎನ್ನಲಾಗಿದೆ. ಆದರೆ ಈ ರಮ್ಯಾ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. 

ಅಂಬಿ ಅಂತಿಮ ದರ್ಶನಕ್ಕೆ ರಮ್ಯಾ ಗೈರಾಗಿದ್ದೇಕೆ?