ಪ್ರಕರಣ ಬೇಧಿಸಲು ಗೂಗಲ್‌ ಮೊರೆ ಹೋದ ಪೊಲೀಸರು!

Police Now Take Help From Google
Highlights

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ತರಗತಿ ಗಣಿತ ಪಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಸಿಬಿಎಸ್‌ಇ ಮುಖ್ಯಸ್ಥರಿಗೆ ಬಂದ ಇ- ಮೇಲ್‌ ವಿಳಾಸದ ಮಾಹಿತಿ ನೀಡುವಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಗೂಗಲ್‌ಗೆ ಪತ್ರ ಬರೆದಿದ್ದಾರೆ.

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ತರಗತಿ ಗಣಿತ ಪಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಸಿಬಿಎಸ್‌ಇ ಮುಖ್ಯಸ್ಥರಿಗೆ ಬಂದ ಇ- ಮೇಲ್‌ ವಿಳಾಸದ ಮಾಹಿತಿ ನೀಡುವಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಗೂಗಲ್‌ಗೆ ಪತ್ರ ಬರೆದಿದ್ದಾರೆ.

ಸಿಬಿಎಸ್‌ಇ ಮುಖ್ಯಸ್ಥೆ ಅನಿತಾ ಕಾರ್ವಾಲ್‌, ಗಣಿತ ಪರೀಕ್ಷೆ ನಡೆದ ಮಾ.28ರ ಮುನ್ನಾದಿನ ಇ- ಮೇಲ್‌ವೊಂದನ್ನು ಸ್ವೀಕರಿಸಿದ್ದರು. ಸಿಬಿಎಸ್‌ಇ ಮುಖ್ಯಸ್ಥರಿಗೆ ಬಂದ ಇ- ಮೇಲ್‌ ವಿಳಾಸದ ಐಡಿ ನೀಡುವಂತೆ ದೆಹಲಿ ಪೊಲೀಸರು ಗೂಗಲ್‌ ಕಂಪನಿಗೆ ಪತ್ರ ಬರೆದಿದ್ದಾರೆ. ಇ- ಮೇಲ್‌ನಲ್ಲಿ 12 ಹಸ್ತಾಕ್ಷರದಲ್ಲಿ ಬರೆದ 12 ಪೇಜ್‌ಗಳಿವೆ. ಅದನ್ನು ವಾಟ್ಸಪ್‌ ಗ್ರೂಪ್‌ಗಳಲ್ಲಿ ಪೋಸ್ಟ್‌ ಮಾಡಲಾಗಿತ್ತು.

loader