ಪಾಡೆರುನಲ್ಲಿ ಒಂದೇ ಒಂದು ಸ್ಟೇಟ್ ಬ್ಯಾಂಕ್ ಎಟಿಎಂ ಇದೆ. ಈ ಎಟಿಎಂನಲ್ಲಿ ದುಡ್ಡು ಬಿಡಿಸಲು ಜನ ಪರದಾಡಿದ್ದಾರೆ. ನಿನ್ನೆ ರಾತ್ರಿ ಪೇದೆ ಎಟಿಎಂನಲ್ಲಿ ದುಡ್ಡಿ ಬಿಡಿಸಲು ಕ್ಯೂ ನಿಂತಿದ್ದಾನೆ.

ದೊಡ್ಡ ನೋಟುಗಳು ರದ್ದಾಗಿರುವುದು ಜನರನ್ನು ಸಮಸ್ಯೆಗೆ ದೂಡಿದೆ. ಆಂಧ್ರದ ವಿಶಾಖಪಟ್ಟಣಂ ಜಿಲ್ಲೆಯ ಪಾಡೆರುನಲ್ಲಿ ಪೊಲೀಸ್‌ ಪೇದೆಯೋರ್ವ ದುಡ್ಡು ಸಿಗಲಿಲ್ಲ ಎಂಬ ಕಾರಣಕ್ಕೆ ಎಟಿಎಂ ಯಂತ್ರವನ್ನು ಕಾಲಿನಿಂದ ಒದ್ದು ಧ್ವಂಸಗೊಳಿಸಿದ್ದಾನೆ. ಪಾಡೆರುನಲ್ಲಿ ಒಂದೇ ಒಂದು ಸ್ಟೇಟ್ ಬ್ಯಾಂಕ್ ಎಟಿಎಂ ಇದೆ. ಈ ಎಟಿಎಂನಲ್ಲಿ ದುಡ್ಡು ಬಿಡಿಸಲು ಜನ ಪರದಾಡಿದ್ದಾರೆ. ನಿನ್ನೆ ರಾತ್ರಿ ಪೇದೆ ಎಟಿಎಂನಲ್ಲಿ ದುಡ್ಡಿ ಬಿಡಿಸಲು ಕ್ಯೂ ನಿಂತಿದ್ದಾನೆ. ಆದ್ರೆ ಆತನ ಸರದಿ ಬರುವಷ್ಟರಲ್ಲಿ ಎಟಿಎಂ ಯಂತ್ರ ಕೆಟ್ಟು ಹೋಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದ್ರಿಂದ ಸಿಟ್ಟಿಗೆದ್ದ ಪೇದೆ ಕಾಲಿನಿಂದ ಅದನ್ನು ಒದ್ದು ಕೋಪ ತೀರಿಸಿಕೊಂಡಿದ್ದಾನೆ. ಒಂದು ಯಂತ್ರವನ್ನು ಒದ್ದು ಹೊರಗೆ ಹೋದ ಪೇದೆ ಸಿಟ್ಟಿನಿಂದ ಹಿಂತಿರುಗಿ ಬಂದು ಇನ್ನೊಂದು ಯಂತ್ರದ ಮೇಲೂ ಪ್ರತಾಪ ತೋರಿಸಿದ್ದಾನೆ. ಇದ್ರಿಂದಾಗಿ ಎರಡು ಎಟಿಎಂ ಯಂತ್ರಗಳು ಕೆಟ್ಟು ನಿಂತಿದೆ.