ಸಭೆಗೆ ಕೆಂಪಯ್ಯ ಅವರನ್ನು ಆಹ್ವಾನಿಸದ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು,ಇದೊಂದು ಸಾಮಾನ್ಯ ಸಭೆ. ಇದಕ್ಕೆ ಸಲಹೆಗಾರರ ಅವಶ್ಯಕತೆ ಏನಿರುತ್ತದೆ. ನಾನು ಕುಮಾರಸ್ವಾಮಿ, ಅಶೋಕ್ ಸೇರಿದಂತೆ ಎಲ್ಲರ ಸಲಹೆ ಪಡೆಯುತ್ತೇನೆ.
ಬೆಂಗಳೂರು(ಸೆ.09): ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ದೊರೆತಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಲಿದೆ. ಸಮರ್ಥ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿ ಜಾಮ್ ದಾರ್ ಅವರಿಗೆ ಬೆದರಿಕೆ ಇದೆ ಎಂಬ ಮಾಹಿತಿ ಬಂದಿದೆ. ಅವರಿಗೆ ಭದ್ರತೆ ಒದಗಿಸುತ್ತೇವೆ. ವಿಚಾರವಾದಿಗಳು ಯಾರೆ ಕೇಳಿದರೂ ಭದ್ರತೆ ಕೊಡುತ್ತೇವೆ ಎಂದು ತಿಳಿಸಿದರು.
ಸಭೆಗೆ ಕೆಂಪಯ್ಯ ಅವರನ್ನು ಆಹ್ವಾನಿಸದ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು,ಇದೊಂದು ಸಾಮಾನ್ಯ ಸಭೆ. ಇದಕ್ಕೆ ಸಲಹೆಗಾರರ ಅವಶ್ಯಕತೆ ಏನಿರುತ್ತದೆ. ನಾನು ಕುಮಾರಸ್ವಾಮಿ, ಅಶೋಕ್ ಸೇರಿದಂತೆ ಎಲ್ಲರ ಸಲಹೆ ಪಡೆಯುತ್ತೇನೆ.ಅವಶ್ಯಕತೆ ಇದ್ದಾಗ ಕೆಂಪಯ್ಯ ಅವರ ಸಲಹೆ ಪಡೆಯುತ್ತೇನೆ. ನಾನು ಸುಮಾರು 35 ವರ್ಷ ರಾಜಕಾರಣದಲ್ಲಿ ಇದ್ದೇನೆ. ಅಧಿಕಾರ ನಡೆಸುವ ಸಾಮರ್ಥ್ಯ ನನಗೂ ಇದೆ' ಎಂದು ಹೇಳಿದರು.
