ರುದ್ರೇಶ್’ಗೆ ಕರೆಮಾಡಿ ಹೊಟೇಲ್’ಗೆ ಬರುವಂತೆ ಹೇಳಿರುವವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಬಳಿಕ ಆ ಇಬ್ಬರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು (ಅ.19): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸ್ ಮೂಲಗಳಿಂದ ಸುವರ್ಣನ್ಯೂಸ್’ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಹಂತಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಳೇ ಪಲ್ಸರ್​ನಲ್ಲಿ ಬಂದಿದ್ದ ಕೊಲೆ ಆರೋಪಿಗಳು. ಕೊಲೆ ಮಾಡಿದ್ದ ಸಂದರ್ಭದಲ್ಲಿ ಮಂಕಿ ಕ್ಯಾಪ್ ಹಾಕಿದ್ದರು.

ರುದ್ರೇಶ್’ಗೆ ಕರೆಮಾಡಿ ಹೊಟೇಲ್’ಗೆ ಬರುವಂತೆ ಹೇಳಿರುವವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಬಳಿಕ ಆ ಇಬ್ಬರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ ಎನ್ನಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ರುದ್ರೇಶ್ ಭಾನುವಾರದಂದು ದುಷ್ಕರ್ಮಿಗಳಿಂದ ಹಾಡುಹಗಲೇ ಕೊಲೆಗೀಡಾಗಿದ್ದರು.