Asianet Suvarna News Asianet Suvarna News

ಬೆಂಗಳೂರಲ್ಲಿ ಶೂಟೌಟ್; ಚಾಕುವಿನಿಂದ ಹಲ್ಲೆ ಮಾಡಲು ಬಂದ ಗಾಂಜಾ ಮಾರಾಟಗಾರರ ಮೇಲೆ ಪೊಲೀಸ್ ಫೈರಿಂಗ್

ಪೊಲೀಸ್​​ ಪೇದೆ ಸಾಬರೆಡ್ಡಿಯ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ಮಾಡುತ್ತಾರೆ. ಆಗ ಇನ್ಸ್​'​ಪೆಕ್ಟರ್  ಸತ್ಯನಾರಾಯಣ ಆರೋಪಿಗಳ ಮೇಲೆ 5 ಸುತ್ತು ಗುಂಡು ಹಾರಿಸುತ್ತಾರೆ.

police firing on alleged drug peddlers in bengaluru
  • Facebook
  • Twitter
  • Whatsapp

ಬೆಂಗಳೂರು(ಜುಲೈ 24): ಪೊಲೀಸ್​​ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾದ ಆರೋಪಿಗಳ ಮೇಲೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್​​ ಇನ್ಸ್'​​ಪೆಕ್ಟರ್ ಫೈರಿಂಗ್ ಮಾಡಿದ್ದಾರೆ.​​ ಬಳಿಕ ಆರೋಪಿಗಳನ್ನ ಬಂಧಿಸಿದ್ದಾರೆ. ಅಕ್ರಮ ಗಾಂಜಾ ಮಾರಾಟ ಸಂಬಂಧ ಆರೋಪಿಗಳನ್ನ ಬಂಧಿಸಲು ಹೋದಾಗ ಈ ಘಟನೆ ನಡೆದಿದೆ.

ಬ್ಯಾಡರಹಳ್ಳಿ ಪೊಲೀಸ್​​ ಇನ್ಸ್'​​ಪೆಕ್ಟರ್​​ ಸತ್ಯನಾರಾಯಣ ಅಂಡ್​​ ಟೀಂ, ನಿನ್ನೆ ಸಂಜೆ ಉಲ್ಲಾಳದ ವೆಂಕಟಪ್ಪ ಲೇಔಟ್'​ಗೆ ತೆರಳಿ ಅಕ್ರಮ ಗಾಂಜಾ ಮಾರಾಟಗಾರರನ್ನು ಹಿಡಿಯಲು ಯತ್ನಿಸಿದೆ. ಈ ವೇಳೆ ಪೊಲೀಸ್​​ ಪೇದೆ ಸಾಬರೆಡ್ಡಿಯ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ಮಾಡುತ್ತಾರೆ. ಆಗ ಇನ್ಸ್​'​ಪೆಕ್ಟರ್  ಸತ್ಯನಾರಾಯಣ ಆರೋಪಿಗಳ ಮೇಲೆ 5 ಸುತ್ತು ಗುಂಡು ಹಾರಿಸುತ್ತಾರೆ. ಬಳಿಕ, ಗಾಯಗೊಂಡ ಆರೋಪಿಗಳನ್ನ ಬಂಧಿಸುತ್ತಾರೆ. ಇದೇ ವೇಳೆ, ಘಟನೆಯಲ್ಲಿ ಗಾಯಗೊಂಡ ಪೇದೆ ಸಾಬರೆಡ್ಡಿ ಮತ್ತು ಆರೋಪಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Follow Us:
Download App:
  • android
  • ios