ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಜಿ ಗೆಳೆಯನ ವಿರುದ್ಧ ಪೊಲೀಸರ ಕ್ರಮ

First Published 22, Feb 2018, 9:23 AM IST
Police File Chargesheet Against Ness Wadia In Preity Zinta Molestation Case
Highlights

ನಟಿ ಪ್ರೀತಿ ಜಿಂಟಾ, ತಮ್ಮ ಮಾಜಿ ಗೆಳೆಯ ಉದ್ಯಮಿ ನೆಸ್‌ ವಾಡಿಯಾ ವಿರುದ್ಧ 4 ವರ್ಷಗಳ ಹಿಂದೆ ಸಲ್ಲಿಸಿದ್ದ ಕಿರುಕುಳದ ದೂರಿನ ಪ್ರಕರಣ ಸಂಬಂಧ ಪೊಲೀಸರು ಇದೀಗ 500 ಪುಟಗಳ ಆರೋಪ ಪಟ್ಟಿಸಲ್ಲಿಸಿದ್ದಾರೆ.

ನವದೆಹಲಿ: ನಟಿ ಪ್ರೀತಿ ಜಿಂಟಾ, ತಮ್ಮ ಮಾಜಿ ಗೆಳೆಯ ಉದ್ಯಮಿ ನೆಸ್‌ ವಾಡಿಯಾ ವಿರುದ್ಧ 4 ವರ್ಷಗಳ ಹಿಂದೆ ಸಲ್ಲಿಸಿದ್ದ ಕಿರುಕುಳದ ದೂರಿನ ಪ್ರಕರಣ ಸಂಬಂಧ ಪೊಲೀಸರು ಇದೀಗ 500 ಪುಟಗಳ ಆರೋಪ ಪಟ್ಟಿಸಲ್ಲಿಸಿದ್ದಾರೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದಲ್ಲಿ ಪ್ರೀತಿ ಮತ್ತು ನೆಸ್‌ ಪಾಲುದಾರರಾಗಿದ್ದರು. ಈ ವೇಳೆ ಅವರ ನಡುವೆ ಆತ್ಮೀಯ ಗೆಳೆತನವಿತ್ತು. ಆದರೆ ಬಳಿಕ ಸಂಬಂಧ ಹಳಸಿತ್ತು.

ಈ ನಡುವೆ ಐಪಿಎಲ್‌ ಪಂದ್ಯಾಟಗಳ ವೇಳೆ ತಮಗೆ ನೆಸ್‌ ವಾಡಿಯಾ, ದೈಹಿಕ ಹಿಂಸೆ ಹಾಗು ಬೆದರಿಕೆ ನೀಡಿದ್ದಾಗಿ ಪ್ರೀತಿ ದೂರು ನೀಡಿದ್ದರು. ಅಲ್ಲದೆ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಕೇವಲ ನನ್ನೊಂದಿಗೆ ಮಾತ್ರವಲ್ಲದೆ ಟೀಮ್‌ನ ಇತರ ಸದಸ್ಯರೊಂದಿಗೂ ಹಲವು ಬಾರಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ಸಲ್ಲಿಸಿದ್ದರು.

loader