ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿ ಫೇಸ್'ಬುಕ್ ನಲ್ಲಿ ಸ್ಟೇಟಸ್ ಹಾಕಿ ವಿವಾದ ಸೃಷ್ಟಿ ಮಾಡಿದ್ದ ಪೇದೆ ರಾಜು ಶಿವಪ್ಪರವರನ್ನು ಇಲಾಖೆ ತನಿಖೆ ನಡೆಸಿ ಅಮಾನತು ಆದೇಶ ನೀಡಿರುವುದಾಗಿ ದ.ಕ. ಜಿಲ್ಲೆ ಎಸ್ಪಿ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ನ.02): ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿ ಫೇಸ್'ಬುಕ್ ನಲ್ಲಿ ಸ್ಟೇಟಸ್ ಹಾಕಿ ವಿವಾದ ಸೃಷ್ಟಿ ಮಾಡಿದ್ದ ಪೇದೆ ರಾಜು ಶಿವಪ್ಪರವರನ್ನು ಇಲಾಖೆ ತನಿಖೆ ನಡೆಸಿ ಅಮಾನತು ಆದೇಶ ನೀಡಿರುವುದಾಗಿ ದ.ಕ. ಜಿಲ್ಲೆ ಎಸ್ಪಿ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆ ಕಾನ್ಸ್'ಟೇಬಲ್ ರಾಜು ಶಿವಪ್ಪ ಅಮಾನತುಗೊಂಡ ವ್ಯಕ್ತಿ. "ಮೈಲಾರಿ ಕಂಡಾಗ ಸಿಡುಕಿನ ಮುಖ; ಮುಲ್ಲಾ ಕಂಡಾಗ ಅರಳಿದ ಮುಖ" ಎಂದು ಫೇಸ್'ಬುಕ್ ಸ್ಟೇಟಸ್ ಹಾಕಿದ್ದರು. ಜೊತೆಗೆ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿ ಕುರಿತು ವಿಡಂಬನಾತ್ಮಕವಾಗಿ ಬರೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯರನ್ನು "ಸಿದ್ದು ಖಾನ್" ಎಂದು ಟೀಕಿಸಿದ್ದರು. ಕಾನ್ಸ್'ಟೇಬಲ್ ರಾಜು ವಿರುದ್ಧ ಯುವ ಕಾಂಗ್ರೆಸ್ ದೂರು ನೀಡಿತ್ತು. ಅವರನ್ನು ಇಂದು ಅಮಾನತುಗೊಳಿಸಲಾಗಿದೆ.
