ಆತ್ಮಹತ್ಯೆಗೆ ಯತ್ನಿಸಿದ ಸುಭಾಷ್'ಗೆ ಕ್ರಿಕೆಟ್ ಬೆಟ್ಟಿಂಗ್'ನ ಹುಚ್ಚು ಇತ್ತೆಂಬ ಮಾಹಿತಿ ಪೊಲೀಸ್ ಮೂಲಗಳಿಂದ ಸುವರ್ಣನ್ಯೂಸ್'ಗೆ ಸಿಕ್ಕಿದೆ. ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತದೆ. ಬೆಟ್ಟಿಂಗ್'ಗೆ ಸಾಕಷ್ಟು ಹಣ ಹಾಕಿದ್ದ ಪೇದೆ ವಿಪರೀತ ಸಾಲು ಮಾಡಿಕೊಂಡಿದ್ದರೆನ್ನಲಾಗಿದೆ.
ಬೆಂಗಳೂರು(ಮೇ 22): ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್ ಪೇದೆ ಸುಭಾಷ್ ತಮ್ಮ ಕುಟುಂಬಸಮೇತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಭವಿಸಿದೆ. ಈ ದುರಂತದಲ್ಲಿ ಪೇದೆ ಸುಭಾಷ್ ಸ್ವಲ್ಪದರಲ್ಲಿ ಬಚಾವಾಗಿದ್ದಾರಾದೂ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಹೆಗಡೆನಗರದ ಪೊಲೀಸ್ ಕ್ವಾರ್ಟರ್ಸ್'ನಲ್ಲಿನ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಪೇದೆ ಸುಭಾಷ್'ರ ಇಡೀ ಕುಟುಂಬವು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿತ್ತು. ಘಟನೆಯ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ಮತ್ತು ಡಿಸಿಪಿ ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬದುಕುಳಿದಿರುವ ಪೊಲೀಸ್ ಕಾನ್ಸ್'ಟೆಬಲ್ ಸುಭಾಷ್ ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಟ್ಟಿಂಗ್ ಹುಚ್ಚು:
ಆತ್ಮಹತ್ಯೆಗೆ ಯತ್ನಿಸಿದ ಸುಭಾಷ್'ಗೆ ಕ್ರಿಕೆಟ್ ಬೆಟ್ಟಿಂಗ್'ನ ಹುಚ್ಚು ಇತ್ತೆಂಬ ಮಾಹಿತಿ ಪೊಲೀಸ್ ಮೂಲಗಳಿಂದ ಸುವರ್ಣನ್ಯೂಸ್'ಗೆ ಸಿಕ್ಕಿದೆ. ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತದೆ. ಬೆಟ್ಟಿಂಗ್'ಗೆ ಸಾಕಷ್ಟು ಹಣ ಹಾಕಿದ್ದ ಪೇದೆ ವಿಪರೀತ ಸಾಲು ಮಾಡಿಕೊಂಡಿದ್ದರೆನ್ನಲಾಗಿದೆ. ಸಾಲಬಾಧೆ ಹೆಚ್ಚಾಗಿ ಸಾಲಗಾರರ ಕಾಟ ತೀವ್ರವಾದಾಗ ಕುಟುಂಬಸಮೇತ ಆತ್ಮಹತ್ಯೆಗೆ ಶರಣಾಗಲು ಸುಭಾಷ್ ನಿರ್ಧರಿಸಿದನೆನ್ನಲಾಗಿದೆ.
ಬೆಟ್ಟಿಂಗ್ ದಂಧೆಯನ್ನು ತಡೆಯಬೇಕಾದ ಪೊಲೀಸರೇ ಈ ಅಕ್ರಮದ ಬಲೆಗೆ ಬಿದ್ದಿದ್ದು ದುರಂತವೇ ಸರಿ.
