ಪೊಲೀಸ್ ಪೇದೆಯೋರ್ವ ತನಗೆ ಮಹಿಳೆ ಹೆಸರಲ್ಲಿ ಫೇಸ್’ಬುಕ್’ನಲ್ಲಿ ವಂಚಿಸಿದ 22 ವರ್ಷದ ವ್ಯಕ್ತಿಯನ್ನು  ಹತ್ಯೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಪೊಲೀಸ್ ಪೇದೆಯೋರ್ವ ತನಗೆ ಮಹಿಳೆ ಹೆಸರಲ್ಲಿ ಫೇಸ್’ಬುಕ್’ನಲ್ಲಿ ವಂಚಿಸಿದ 22 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಫೇಸ್’ಬುಕ್’ನಲ್ಲಿ ಮಹಿಳೆಯ ಹೆಸರಿನಲ್ಲಿ ಅಕೌಂಟ್ ತೆರೆದ ವ್ಯಕ್ತಿಯಿಂದ ತಮಿಳುನಾಡಿನ ವಿರುಡುನಗರದ ನಿವಾಸಿಯಾದ ಪೇದೆ ಕಣ್ಣನ್ ಕುಮಾರ್ ಮೋಸಹೋಗಿದ್ದ.

ಎಸ್ ಅಯ್ಯನರ್ ಎನ್ನುವ ವಿದ್ಯಾರ್ಥಿ ಮಹಿಳೆ ಹೆಸರಲ್ಲಿ ನಕಲಿ ಖಾತೆ ತೆರೆದು ಪೇದೆಗೆ ನಂಬಿಸಿದ್ದ. ಇದಾದ ಕೆಲ ದಿನಗಳ ಬಳಿಕ ತಾನು ಮೋಸಹೋಗಿರುವ ಬಗ್ಗೆ ತಿಳಿದ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಅಲ್ಲದೇ ಮಾನಸಿಕ ಖಿನ್ನತೆಗೂ ಕೂಡ ಒಳಗಾಗಿದ್ದ.

ಬಳಿಕ ತನ್ನ ಗೆಳೆಯನೊಂದಿಗೆ ಸೇರಿ ಅಯ್ಯನರ್’ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಕೊಲೆ ಮಾಡಿದ್ದಾನೆ.