ಯುವ ಪೊಲೀಸ್ ನೇಮಕಾತಿಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಾಕಷ್ಟು ಸಂಪನ್ಮೂಲ ಮತ್ತು ಸಮಯದ ವ್ಯವವಾಗುತ್ತದೆ. ಹೀಗೆ ತರಬೇತಿ ಪಡೆದ ನಂತರ ಪೊಲೀಸರು ಬೇರೆ ಇಲಾಖೆ ಸೇರಿಕೊಂಡರೆ ಪೊಲೀಸ್ ಇಲಾಖೆಗೆ ನಷ್ಟವಾಗುತ್ತದೆ ಎನ್ನಲಾಗಿದೆ.
ಬೆಂಗಳೂರು(ಸೆ. 26): ರಾಜ್ಯದ ಪ್ರತಿಭಾನ್ವಿತ ಯುವ ಪೊಲೀಸರಿಗೆ ಸರಕಾರ ಭರ್ಜರಿ ಶಾಕ್ ಕೊಟ್ಟಿದೆ. ಪರೀಕ್ಷೆ ಬರೆದು ಬೇರೆ ಇಲಾಖೆಗೆ ಹೋಗಬೇಕೆನ್ನುವ ಪೊಲೀಸರು ಇನ್ಮುಂದೆ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ. ಪೊಲೀಸ್ ವ್ಯವಸ್ಥೆ ಸುಧಾರಣೆ ಹೆಸರಿನಲ್ಲಿ ಪ್ರತಿಭಾನ್ವಿತ ಯುವ ಪೊಲೀಸರಿಗೆ ಸರಕಾರ ಇಂಥದ್ದೊಂದು ಆಘಾತ ನೀಡಿದೆ. ಬೇರೆ ಇಲಾಖೆಗೆ ಹೋಗಲು ಪೊಲೀಸರು ತೆರಬೇಕಾದ ದಂಡದ ಮೊತ್ತವನ್ನು ಸರಕಾರ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದೆ.
ಪೇದೆಗಳಾದವರು ಕೆಲಸಕ್ಕೆ ಸೇರಿ 5 ವರ್ಷದೊಳಗೆ ಬೇರೆ ಇಲಾಖೆ ಹೋಗಬೇಕಾದರೆ ಈ ಮುಂಚೆ 50 ಸಾವಿರ ರೂಪಾಯಿ ದಂಡ ತೆರಬೇಕಿತ್ತು. ಇದೀದ ಆ ಮೊತ್ತವನ್ನು 2 ಲಕ್ಷ ರೂಪಾಯಿಗೆ ಸರಕಾರ ಏರಿಸಿದೆ.
ಯಾಕೆ ಈ ಕ್ರಮ?
ಯುವ ಪೊಲೀಸ್ ನೇಮಕಾತಿಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಾಕಷ್ಟು ಸಂಪನ್ಮೂಲ ಮತ್ತು ಸಮಯದ ವ್ಯವವಾಗುತ್ತದೆ. ಹೀಗೆ ತರಬೇತಿ ಪಡೆದ ನಂತರ ಪೊಲೀಸರು ಬೇರೆ ಇಲಾಖೆ ಸೇರಿಕೊಂಡರೆ ಪೊಲೀಸ್ ಇಲಾಖೆಗೆ ನಷ್ಟವಾಗುತ್ತದೆ ಎನ್ನಲಾಗಿದೆ. ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿಯೊಂದು ಕೂಡ ತನ್ನ ವರದಿಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಿತ್ತು. ಸ್ನಾತಕೋತ್ತರ ಪದವಿ ಪಡೆದು ಪೇದೆ ಹುದ್ದೆಗೆ ಸೇರಿಕೊಳ್ಳುವ ಯುವಕರು ಉನ್ನತ ಪರೀಕ್ಷೆ ಬರೆದು ಬೇರೆ ಇಲಾಖೆಗೆ ಹೋಗುವ ಪ್ರಮಾಣ ಹೆಚ್ಚುತ್ತಿದೆ ಎಂದು ಈ ಸಮಿತಿ ಆತಂಕ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಕ್ರಮ ಕೈಗೊಂಡಿದೆ.
