ಹುಬ್ಬಳ್ಳಿ :  ರಜೆ ಕೊಡಲಿಲ್ಲ ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರು ಸರ್ಕಲ್‌ ಇನ್ಸ್‌ಪೆಕ್ಟರ್‌ (ಸಿಪಿಐ)ಗೆ ಇಲ್ಲಿನ ಉಪನಗರ ಪೊಲೀಸ್‌ ಠಾಣೆಯಲ್ಲಿ ಆವಾಜ್‌ ಹಾಕಿದ್ದು, ಇದೀಗ ವಿಡಿಯೋ ವೈರಲ್‌ ಆಗಿದೆ.

ಸಿಪಿಐ ಡಿಸೋಜಾ ರಜೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಅವರ ಕ್ಯಾಬಿನ್‌ಗೆ ನುಗ್ಗಿದ ಲೇಡಿ ಕಾನ್ಸ್‌ಟೇಬಲ್‌ ಬಾಯಿಗೆ ಬಂದಂತೆ ಕೂಗಾಡಿದ್ದಾರೆ. ಈ ವೇಳೆ ಠಾಣೆಯ ಇತರೆ ಸಿಬ್ಬಂದಿ ಸಮಾಧಾನ ಪಡಿಸಲು ಯತ್ನಿಸಿದರೂ ಶಾಂತವಾಗದ ಮಹಿಳಾ ಪೇದೆ, ಸಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಠಾಣೆಯ ಸಿಬ್ಬಂದಿಯೊಬ್ಬರು ಇದನ್ನೆಲ್ಲ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ಅದೀಗ ವೈರಲ್‌ ಆಗಿದೆ. ಈ ಬಗ್ಗೆ ಇದೀಗ ಸಾಕಷ್ಟುಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.