ಆದರೆ ಕಾನೂನು ಪಾಲಿಸಬೇಕಾದ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್, ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಮಾನತು ಮಾಡುವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಮನನೊಂದ ಪೇದೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಷಯ ತಿಳಿದ ಮೇಲಾಧಿಕಾರಿಗಳು ಘಟನೆ ಬಗ್ಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.
ಬೆಂಗಳೂರು (ಜ.17): ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಎಚ್.ಎಸ್.ಆರ್ ಲೇ ಔಟ್ ಪೊಲೀಸ್ ಠಾಣೆಯ ಅಂಜಿ ಎಂಬ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕಳೆದ ಭಾನುವಾರ ಹೆಚ್.ಎಸ್.ಆರ್ ಲೇ ಔಟ್ನಲ್ಲಿರೋ ಕಾಂಗ್ರೆಸ್ ಮುಖಂಡ ಉಗ್ರಪ್ಪ ನಿವಾಸದ ಬಳಿಯಿರುವ ನಿಜಾಂ ಎಂಬ ಹೊಟೇಲ್’ನಲ್ಲಿ ತಡರಾತ್ರಿಯಾದರೂ ಹೆಚ್ಚಿನ ಸೌಂಡ್ ಇಟ್ಟು ಪಾರ್ಟಿ ನಡೆಯುತ್ತಿತ್ತು. ಹಾಗಾಗಿ ಅವರು ಸೌಂಡ್ ಕಡಿಮೆ ಮಾಡಿಸುವಂತೆ ಪೊಲೀಸರಲ್ಲಿ ಕೇಳಿ ಕೊಂಡಿದ್ದಾರೆ. ಹೋಟೆಲ್’ಗೆ ಹೋಗಿ ಸೌಂಡ್ ಕಡಿಮೆ ಮಾಡಲು ಹೇಳಿದ ಪೇದೆ ಜತೆ ಹೋಟೆಲ್ ಮಾಲಕರ ವಗ್ವಾದ ನಡೆಸಿದ್ದಾರೆ, ಹಾಗೂ ಠಾಣೆಯ ಇನ್ಸ್ಪೆಕ್ಟರ್’ಗೆ ದೂರು ನೀಡಿದ್ದ.