ವಿಲ್‌, ಸಿಎಆರ್‌ ಸಿಬ್ಬಂದಿ ಸಮವಸ್ತ್ರ ಧರಿಸದಿರು ವುದು, ಹಿರಿಯ ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕಿವಿಗೆ ಓಲೆ, ಹಣೆಗೆ ಕುಂಕುಮ ಇಡುವುದು ಮತ್ತು ತಲೆ ಕೂದಲು ಕಟಿಂಗ್‌ ಮಾಡಿಸದಿರುವುದು, ಕೈಗೆ ಧಾರ ಇಡುವುದು ಗಮನಕ್ಕೆ ಬಂದಿದೆ. ಇದು ಪೊಲೀಸರ ಆಶಿಸ್ತು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ

ಬೆಂಗಳೂರು: ನಗರದ ಸಿವಿಲ್‌ ಮತ್ತು ಸಿಎಆರ್‌ (ನಗರ ಸಶಸ್ತ್ರ ಮೀಸಲು ಪಡೆ) ಪೊಲೀಸರು ಹಣೆಗೆ ಕುಂಕುಮ, ವಿಭೂತಿ ಇಡುವಂತಿಲ್ಲ, ಕಿವಿಗೆ ಓಲೆ ಧರಿಸುವಂತಿಲ್ಲ ಹಾಗೂ ಕೈಗೆ ದಾರ ಕಟ್ಟುವಂತಿಲ್ಲ.

ಇಂಥದೊಂದು ಆದೇಶವನ್ನು ವಿವಿಐಪಿ ಭದ್ರತೆ ವಿಭಾಗದ ಉಪ ಪೊಲೀಸ್‌ ಆಯುಕ್ತ ಡಿ. ಕಿಶೋರ್‌ಬಾಬು ಹೊರಡಿಸಿದ್ದಾರೆ. ಸಿವಿಲ್‌ ಮತ್ತು ಸಿಎಆರ್‌ ಸಿಬ್ಬಂದಿ ಅಶಿಸ್ತಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಸಿವಿಲ್‌, ಸಿಎಆರ್‌ ಸಿಬ್ಬಂದಿ ಸಮವಸ್ತ್ರ ಧರಿಸದಿರು ವುದು, ಹಿರಿಯ ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕಿವಿಗೆ ಓಲೆ, ಹಣೆಗೆ ಕುಂಕುಮ ಇಡುವುದು ಮತ್ತು ತಲೆ ಕೂದಲು ಕಟಿಂಗ್‌ ಮಾಡಿಸದಿರುವುದು, ಕೈಗೆ ಧಾರ ಇಡುವುದು ಗಮನಕ್ಕೆ ಬಂದಿದೆ. ಇದು ಪೊಲೀಸರ ಆಶಿಸ್ತು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸರು ಎಂದರೆ ಶಿಸ್ತು ಪಾಲನಾ ಪಡೆ ಎಂದೇ ಹೆಸರುವಾಸಿ. ಇಂತಹ ಪೊಲೀಸ್‌ ಪಡೆ ಹಣೆಗೆ ಕುಂಕುಮ ಇಡುವುದು, ಓಲೆ ಹಾಕುವುದು, ಕೈಗೆ ದಾರ ಕಟ್ಟುವಂತಿಲ್ಲ ಎಂದು ಪೊಲೀಸ್‌ ಮ್ಯಾನುಯಲ್‌ನಲ್ಲಿ ಹೇಳಲಾಗಿದೆ. ಆದರೂ ಈ ರೀತಿಯಾಗಿ ಆಶಿಸ್ತು ಪಾಲನೆಯಾಗುತ್ತಿರುವುದು ಹಿರಿಯ ಪೊಲೀಸ್‌ ಅಧಿ ಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ. ಪೊಲೀಸ್‌ ಮ್ಯಾನು ಯಲ್‌ ಪ್ರಕಾರ ಮಹಿಳಾ ಸಿಬ್ಬಂದಿ ಕೂಡ ಓಲೆ, ಬಳೆ ತೊಡುವಂತಿಲ್ಲ. ಇದರ ಅನುಷ್ಠಾನಕ್ಕೆ ಮುಂದಾದರೆ ವಿವಿಧ ವರ್ಗದಿಂದ ಹಿರಿಯ ಪೊಲೀಸ್‌ ಅಧಿಕಾರಿಗಳು ವಿರೋಧ ಎದುರಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋಮು ಗಲಾಟೆಗಳು ನಡೆದಾಗ ಶಿಸ್ತು ಪಾಲನಾ ಪಡೆಯ ಸಿಬ್ಬಂದಿ ಕುಂಕುಮದಂತಹ ವಸ್ತುಗಳನ್ನು ಇಡಬಾರದರು. ಇಂತಹ ವಿಚಾರದಲ್ಲಿ ಪೊಲೀಸರು ತಟಸ್ಥವಾಗಿರಬೇಕು. ಆದೇಶ ಉಲ್ಲಂಘಿಸಿದರೆ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕಿಶೋರ್‌ ಬಾಬು ಎಚ್ಚರಿಸಿದ್ದಾರೆ.

(ಸಾಂದರ್ಭಿಕ ಚಿತ್ರ)