Asianet Suvarna News Asianet Suvarna News

ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೊಡೆದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸಪ್ಪ..!

ಥಳಿತಕೊಳ್ಳಗಾದ ಜಾಕೀರ್, ವಿದ್ಯಾರ್ಥಿಗಳ ಮುಂದೆ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳುತ್ತಿದ್ದ, ಈ ವೇಳೆ ಪೊಲೀಸರು ದರ್ಪವನ್ನ ತೊರಿದ್ದಾರೆ. ಪೊಲೀಸರ ಈ ಥಳಿತದಿಂದ ಜಾಕೀರ್ ಕೈಬೆರಳು ಮುರಿದು ಹೊಗಿದ್ದು. ಬೆನ್ನಿನಲ್ಲಿ ಬಾಸುಂಡೆ ಮೂಡಿವೆ.

Police Beaten A Innocent Artist In Public Place
  • Facebook
  • Twitter
  • Whatsapp

ಬೆಳಗಾವಿ(ನ.05): ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳುತ್ತಿದ್ದ ಅಮಾಯಕ ಯುವಕನ ಮೇಲೆ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸರು ದರ್ಪ ತೊರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.  

ಸಾರ್ವಜನಿಕರ ಪ್ರದೇಶದಲ್ಲಿಯೇ ಬೈಲಹೊಂಗಲ ಠಾಣೆಯ ಪೊಲೀಸ್ ಈರಣ್ಣ ವಕ್ಕಂದ ಹಾಗೂ ಹೋಮ್ ಗಾರ್ಡ್'ಗಳು, ಕಲಾವಿದ ಜಾಕೀರ್ ಎಂಬುವರ ಮೇಲೆ ಅಮಾನವೀಯಾಗಿ ಹಲ್ಲೆ ನಡೆಸಿದ್ದು, ನಡು ರಸ್ತೆಯಲ್ಲಿ ಲಾಠಿಯಿಂದ ಯದ್ವಾ ತದ್ವಾ ಹೊಡೆದು, ಬೂಟು ಕಾಲಿನಿಂದ ಒದ್ದು, ಥಳಸಿರುವ ಘಟನೆ ನಿನ್ನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಬಸ್ ಸ್ಟ್ಯಾಂಡ್'ನಲ್ಲಿ  ನಡೆದಿದೆ.  

ಥಳಿತಕೊಳ್ಳಗಾದ ಜಾಕೀರ್, ವಿದ್ಯಾರ್ಥಿಗಳ ಮುಂದೆ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳುತ್ತಿದ್ದ, ಈ ವೇಳೆ ಪೊಲೀಸರು ದರ್ಪವನ್ನ ತೊರಿದ್ದಾರೆ. ಪೊಲೀಸರ ಈ ಥಳಿತದಿಂದ ಜಾಕೀರ್ ಕೈಬೆರಳು ಮುರಿದು ಹೊಗಿದ್ದು. ಬೆನ್ನಿನಲ್ಲಿ ಬಾಸುಂಡೆ ಮೂಡಿವೆ. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲಾವಿದ ಜಾಕೀರ್ ಬೆಳಗಾವಿ ಎಸ್ಪಿ ರವಿಕಾಂತೇಗೌಡಗೆ ಮನವಿ ಮಾಡಿಕೊಂಡಿದ್ದಾನೆ‌.

Follow Us:
Download App:
  • android
  • ios