ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತಿದ್ದ ಅರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.  ಅಯ್ಯಪ್ಪಸ್ವಾಮಿ ಅಲಿಯಾಸ್ ಮಣಿ , ಮಾರುತಿ , ಶಿವಕುಮಾರ್, ಸುಕುಮಾರನ್  ಬಂಧಿತ ಅರೋಪಿಗಳು.

ಬೆಂಗಳೂರು (ಡಿ.13): ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತಿದ್ದ ಅರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಅಯ್ಯಪ್ಪಸ್ವಾಮಿ ಅಲಿಯಾಸ್ ಮಣಿ , ಮಾರುತಿ , ಶಿವಕುಮಾರ್, ಸುಕುಮಾರನ್ ಬಂಧಿತ ಅರೋಪಿಗಳು.

ಆರೋಪಿಗಳುನಂದಿನಿ ತುಪ್ಪ ತಯಾರು ಮಾಡಲು ಹೈದರಾಬಾದ್'ನಿಂದ ಮಷಿನ್ ಖರೀದಿ ಮಾಡಿದ್ದರು. ನಂದಿನಿ ಬಾಕ್ಸ್'ನ ಚಿಹ್ನೆಯನ್ನು ತಮಿಳುನಾಡಿನ ಕೃಷ್ಣ ಗಿರಿಯಲ್ಲಿ ತಯಾರು ಮಾಡಿದ್ದರು. ನಂತರ ಪಾಂಡಿಚೆರಿಯಲ್ಲಿ ಪ್ರಿಂಟಿಂಗ್ ಮಾಡಿಸುತ್ತಿದ್ದರು. ನಂತರ ತುಪ್ಪವನ್ನು ತಯಾರು ಮಾಡಿ ಒಂದು ಟೆಂಪೊ ಟ್ರಾವೆಲರ್ ಮೂಲಕ ಸಾಗಿಸಿ ಮಾರಾಟ ಮಾಡುತ್ತಿದ್ದರು. ಟಿಟಿಯ ಸೀಟನ್ನು ಕಳಚಿಟ್ಟು ಅದರಲ್ಲಿ ತುಪ್ಪವನ್ನು ಸಾಗಾಟ ಮಾಡಿಸುತ್ತಿದ್ದರು. ಸದ್ಯ 600-800 ಲೀಟರ್ ಕಲಬೆರಕೆ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಣಿ ಈ ಮೊದಲು ಲೋಕಲ್ ನ್ಯೂಡಲ್ಸ್ ತಯಾರು ಮಾಡುತ್ತಿದ್ದ. ನಂತರ ನಂದಿನಿ ತುಪ್ಪಕ್ಕೆ ಒಳ್ಳೆಯ ಮಾರ್ಕೆಟಿಂಗ್ ಇದೆ ಎಂದು ನಂದಿನಿ ತುಪ್ಪ ತಯಾರಿಸುತಿದ್ದರು. ಅರೋಪಿಗಳು ತುಪ್ಪವನ್ನು ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತಿದ್ದರು. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಕಲಬೆರಕೆ ತುಪ್ಪವನ್ನು ರಾಜಕಾಲುವೆಗೆ ಸುರಿಯಲು ಆರೋಪಿ ಯತ್ನಿಸಿದ್ದಾನೆ.