ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆಯ ಬಗ್ಗೆ ಅನುಕಂಪ ಹೊಂದಿದ್ದ ಕೋಣಕಲ್ಲ ಸುಬ್ರಮಣ್ಯಂ ಅಲಿಯಸ್‌ ಉಮರ್‌ (22) ಎಂಬುವನನ್ನು ಹೈದರಾಬಾದ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 2014ರಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದ ಈತ ಉಗ್ರ ಚಟುವಟಿಕೆಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ.

ಹೈದರಾಬಾದ್‌: ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆಯ ಬಗ್ಗೆ ಅನುಕಂಪ ಹೊಂದಿದ್ದ ಕೋಣಕಲ್ಲ ಸುಬ್ರಮಣ್ಯಂ ಅಲಿಯಸ್‌ ಉಮರ್‌ (22) ಎಂಬುವನನ್ನು ಹೈದರಾಬಾದ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 2014ರಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದ ಈತ ಉಗ್ರ ಚಟುವಟಿಕೆಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ.

ಇತರ ಐಸಿಸ್‌ ಅನುಕಂಪವಾದಿಗಳ ಜತೆ ಈತ ಸಾಮಾಜಿಕ ಮಾಧ್ಯಮಗಳಲ್ಲಿ ನಂಟು ಬೆಳೆಸಿಕೊಂಡ್ಡಿದ್ದ. ಭಾರತ ದೇಶದಲ್ಲಿ ಕೆಲ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಯಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈತನ ಚಟುವಟಿಕೆಯ ಸುಳಿವು ಸಿಕ್ಕ ಬೆನ್ನಲ್ಲೇ ವಿಶೇಷ ತನಿಖಾ ತಂಡ ಉಮರ್‌ನನ್ನು ಬಂಧಿಸಿತು. ಈತನ ಬಳಿ ಸಿಕ್ಕ ಮೊಬೈಲ್‌ನಲ್ಲಿ ಐಸಿಸ್‌ ಅನುಕಂಪವಾದಿಗಳ ಜತೆ ಚಾಟ್‌ ನಡೆಸಿದ ಮಾಹಿತಿ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಈತನ ಮೇಲೆ ದೇಶದ್ರೋಹ, ಕ್ರಿಮಿನಲ್‌ ಸಂಚು, ಅಕ್ರಮ ಚಟುವಟಿಕೆ- ಮೊದಲಾದ ಪ್ರಕರಣ ದಾಖಲಿಸಲಾಗಿದೆ.