ನಾವು ಹೇಳೋದನ್ನ ಕೇಳಿದ್ರೆ ನಿಮಗೆ ಅಚ್ಚರಿಯಾತಾಗುತ್ತೆ. ಈ ವರೆಗೆ ದುಬಾರಿ ಬೆಲೆಯ ಸಕ್ಕರೆ, ಅಕ್ಕಿ ಹಾಗೂ ಮೊಟ್ಟೆಗಳು ಮಾತ್ರ ಪ್ಲಾಸ್ಟಿಕ್'ನಿಂದ ತಯಾರಿಸಲ್ಪಡ್ತಿವೆ ಅಂಥ ಕೇಳಿದ್ದೆವು. ಆದರೆ ಇಲ್ಲೊಂದು ಸ್ಟೋರಿ ನಿಮ್ಮ-ನಮ್ಮನ್ನೆಲ್ಲಾ ಬೆಚ್ಚಿ ಬೀಳಿಸುತ್ತೆ. ಏನಪ್ಪಾ ಅದು ಅಂತೀರಾ..? ಇಲ್ಲಿದೆ ನೋಡಿ ವಿವರ

ಹುಬ್ಬಳ್ಳಿ(ಅ.11): ಚಿಕ್ಕ ಮಕ್ಕಳು ಬಹಳ ಇಷ್ಟಪಟ್ಟು ತಿನ್ನುವ ಪಾಪಡಿ ಅಥವಾ ಬೋಟಿಗಳ ತಯಾರಿಕೆಯಲ್ಲಿ ರಾಸಾಯನಿಕ ಪ್ಲಾಸ್ಟಿಕ್ ಮಿಶ್ರಣ ಬಳಸುವುದು ಜನರನ್ನ ಬೆಚ್ಚಿ ಬೀಳಿಸಿದೆ. ಈ ಪಾಪಡಿಗಳು ನೋಡಲು ಉದ್ದವಾಗಿ, ಅತ್ಯಂತ ಆಕರ್ಷಕವಾಗಿರುತ್ವೆ. ಹೀಗಾಗಿ ಮಕ್ಕಳು ಈ ಪಾಪಡಿಗಳತ್ತ ಮರುಳಾಗುತ್ವೆ. ಆದ್ರೆ ಈ ಪ್ಲಾಸ್ಟಿಕ್ ಪಾಪಡಿಗಳನ್ನ ಮಕ್ಕಳು ತಿಂದ್ರೆ ಅವರ ಆರೋಗ್ಯ ಹರೋಹರ.

ಈವರೆಗೆ ಇದ್ದ ಪಾಪಡಿಗಳೊಂದಿಗೆ ಪೈಪೋಟಿ ನಡೆಸಲು ಈಗ ಕಂಪನಿಯ ಉದ್ದದ ಪಾಪಡಿಗಳನ್ನ ಹುಬ್ಬಳ್ಳಿ ಮತ್ತಿತರ ನಗರಗಳಲ್ಲಿ ಉತ್ಪಾದಿಸಲಾಗ್ತಿದೆ. ಅಲ್ಲದೇ ಈ ಪ್ಲಾಸ್ಟಿಕ್ ಪಾಪಡಿಗಳನ್ನ ಶಾಲೆಗಳ ಅಕ್ಕ ಪಕ್ಕದಲ್ಲಿಯೇ ಮಾರಾಟ ಮಾಡಲಾಗ್ತಿದೆಯಾದ್ದರಿಂದ, ಇದನ್ನು ತಿಂದ ಮಕ್ಕಳಿಗೆ ಹೊಟ್ಟೆ ನೋವು ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ತಿವೆ.

ಒಟ್ಟಾರೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ನೋಡಿ ಬೆಚ್ಚಿ ಬಿದ್ದಿದ್ದ ಜನರಿಗೆ, ಈ ಪ್ಲಾಸ್ಟಿಕ್ ಪಾಪಡಿ ನೋಡಿ ಇನ್ನಷ್ಟು ಆಘಾತವಾಗಿರೋದ್ರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಹೀಗಾಗಿ ಸಂಭಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಇಂತಹ ಕಂಪನಿಗಳನ್ನ ಮಟ್ಟ ಹಾಕಬೇಕಾಗಿದೆ.