ಚಾಮರಾಜನಗರ[ಡಿ.22] ಸುಳ್ವಾಡಿ ವಿಷಮಿಶ್ರಿತ ‌ಪ್ರಸಾದ ದುರಂತ ಪ್ರಕರಣದ ಪರಿಣಾಮಗಳು ಮುಗಿಯುವಂತೆ ಕಾಣುತ್ತಿಲ್ಲ. ಪ್ರಸಾದ ಸೇವಿಸಿದ್ದ ಐದು ತಿಂಗಳ ಗರ್ಭಿಣಿಗೆ ಗರ್ಭಪಾತವಾಗಿದ್ದು ತಾಯಿ ಆಗುವ ಕಸನನ್ನು ವಿಷ ಕಸಿದುಕೊಂಡಿದೆ.

ಬಿದರಹಳ್ಳಿಯ ಸೌಂದರ್ಯಳಿಗೆ ಗರ್ಭಪಾತವಾಗಿದೆ. ಮಕ್ಕಳಾಗಲಿ ಎಂದು ಮಾರಮ್ಮನಿಗೆ ಹರಕೆ ಮಾಡಿಕೊಂಡಿದ್ದ ಸೌಂದರ್ಯ ಗರ್ಭವತಿಯಾದಾಗಿನಿಂದ ಪ್ರತಿವಾರ ಮಾರಮ್ಮನ ದೇವಸ್ಥಾನಕ್ಕೆ ತಪ್ಪದೆ ತೆರಳುತ್ತಿದ್ದರು. ಮಾರಮ್ಮನ ಮೇಲಿದ್ದ ಭಕ್ತಿಗೆ ಓಂಶಕ್ತಿ ಮಾಲೆ ಧರಿಸಿದ್ದರು. 

ಪ್ರಸಾದಕ್ಕೆ ವಿಷ ಹಾಕಿದ ದುರುಳರು ಇವರೆ

ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಳಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಡಿಸ್ ಚಾಜ್೯ ಆಗಿದ್ದರು. ನಿನ್ನೆ ರಾತ್ರಿ ಬಿದರಹಳ್ಳಿಯ ನಿವಾಸದಲ್ಲಿದ್ದಾಗ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ದಾಖಲಾಗಿದಾಗ ಗರ್ಭಪಾತ ಆಗಿರುವುದು ಗೊತ್ತಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಕೊಳ್ಳೇಗಾಲ ಆಸ್ಪತ್ರೆಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಯಕಾಂತ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.