Asianet Suvarna News Asianet Suvarna News

ರೋಗಿಯ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಚೇರಿ

ಸ್ಪಾಂಡಿಲೋಸಿಸ್ ರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು  ಮತ್ತು ಆಯುಷ್ಮಾನ್ ಇಂಡಿಯಾ ಯೋಜನೆಯಡಿ ತಂದು ವಿಮಾ ಕಂಪನಿಗಳು ಇದರ ಚಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ವ್ಯಕ್ತಿಯೋರ್ವರು ಪ್ರಧಾನಿ ಕಚೇರಿಗೆ ಬರೆದ ಪತ್ರಕ್ಕೆ ಇದೀಗ ಪ್ರಧಾನಿ ಕಚೇರಿ ಪ್ರತಿಕ್ರಿಯೆ ನೀಡಿದೆ. ಆರೋಗ್ಯ ಸಚಿವಾಲಯವು ಈ ಬಗ್ಗೆ ಕ್ರಮ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ.

PMO asks health ministry to look into patients request

ನವದೆಹಲಿ :  ಸ್ಪಾಂಡಿಲೋಸಿಸ್ ರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು  ಮತ್ತು ಆಯುಷ್ಮಾನ್ ಇಂಡಿಯಾ ಯೋಜನೆಯಡಿ ತಂದು ವಿಮಾ ಕಂಪನಿಗಳು ಇದರ ಚಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ವ್ಯಕ್ತಿಯೋರ್ವರು ಪ್ರಧಾನಿ ಕಚೇರಿಗೆ ಬರೆದ ಪತ್ರಕ್ಕೆ ಇದೀಗ ಪ್ರಧಾನಿ ಕಚೇರಿ ಪ್ರತಿಕ್ರಿಯೆ ನೀಡಿದೆ. ಆರೋಗ್ಯ ಸಚಿವಾಲಯವು ಈ ಬಗ್ಗೆ ಕ್ರಮ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ.

ಲೈಫ್ ಸ್ಟೈಲ್ ರೋಗವಾದ ಇದಕ್ಕೆ  ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಮತ್ತು ವಿಮಾ ಕಂಪನಿಗಳು ತಮ್ಮ ವಿಮಾ ಯೋಜನೆಯಡಿ ಇದನ್ನು ತಂರಬೇಕೆಂದು 30 ವರ್ಷದ ಅಂಕುರ್ ಪತ್ರ ಬರೆದಿದ್ದರು. ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.

ಇದರ ಚಿಕಿತ್ಸೆಯು ಕೂಡ ಅತ್ಯಂತ ದುಬಾರಿಯಾಗಿದ್ದು, ಒಂದು ಇಂಜೆಕ್ಷನ್ ಬೆಲೆ 60 ರಿಂದ 70 ಸಾವಿರ ಇದೆ. ಇದಕ್ಕೆ ಒಟ್ಟು ಮೂರು ಇಂಜೆಕ್ಷನ್’ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಆಯುಷ್ಮಾನ್ ಇಂಡಿಯಾ  ಯೋಜನೆಯಡಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದ್ದರು. ಇದಕ್ಕೆ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ದೊರಕಿದೆ.

Follow Us:
Download App:
  • android
  • ios