ಕಳೆದ ವರ್ಷದ ಬರಗಾಲ ತಮಿಳುನಾಡನ್ನು ಬಾಧಿಸಿದೆ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೆನ್ನೈ(ಜು.01): ರಾಷ್ಟ್ರಪತಿ ಚುನಾವಣೆಯಲ್ಲೂ ಕಾವೇರಿ ವಿವಾದವನ್ನು ತಮಿಳುನಾಡಿನ ರಾಜಕೀಯ ಪಕ್ಷಗಳು ಎಳೆದು ತಂದಿವೆ. ‘ಒಂದು ತಿಂಗಳಲ್ಲೇ ಕಾವೇರಿ ನಿರ್ವಹಣಾ ಮಂಡಳಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಚಿಸಬೇಕು. ಆಗ ಮಾತ್ರ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್‌ಗೆ ನಾವು ಬೆಂಬಲ ನೀಡುತ್ತೇವೆ’ ಎಂದು ಪಿಎಂಕೆ ಅಧ್ಯಕ್ಷ ಎಸ್. ರಾಮದಾಸ್ ಷರತ್ತು ವಿಧಿಸಿದ್ದಾರೆ. ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಕಳೆದ ವರ್ಷದ ಬರಗಾಲ ತಮಿಳುನಾಡನ್ನು ಬಾಧಿಸಿದೆ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ಕುರುವೈ ಬೆಳೆಗಳಲ್ಲಿ 3 ಬೆಳೆ ಮಾತ್ರ ತೆಗೆಯಲಾಗಿದೆ. ಇದಕ್ಕೆ ಕಾರಣ ಕಾವೇರಿ ವಿವಾದ ಕೂಡ ಒಂದು. ಈವರೆಗೂ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ವಿಫಲವಾಗಿದೆ’ ಎಂದು ಆರೋಪಿಸಿದರು.