Asianet Suvarna News Asianet Suvarna News

ಬಿಡುಗಡೆಯಾಯ್ತು ಪ್ರಧಾನಿ ಪುಸ್ತಕ : ಪುಸ್ತಕದಲ್ಲಿ ಪ್ರಸ್ತಾಪವಾದ ವಿಷಯಗಳೇನು..?

ಪರೀಕ್ಷೆ ಬಂತೆಂದರೆ ವಿದ್ಯಾರ್ಥಿ ಗಳು ತುಂಬಾ ಒತ್ತಡಕ್ಕೆ ಒಳಗಾಗಿಬಿಡುತ್ತಾರೆ. ಪ್ರತಿ ವರ್ಷ ವಿದ್ಯಾರ್ಥಿ ಸಮುದಾಯ ಎದುರಿಸುವ ಈ ಸಮಸ್ಯೆ ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪುಸ್ತಕವೊಂದನ್ನು ಹೊರತಂದಿದ್ದಾರೆ.

PM Narendra Modis Book for Students to be Released Today

ನವದೆಹಲಿ: ಪರೀಕ್ಷೆ ಬಂತೆಂದರೆ ವಿದ್ಯಾರ್ಥಿ ಗಳು ತುಂಬಾ ಒತ್ತಡಕ್ಕೆ ಒಳಗಾಗಿಬಿಡುತ್ತಾರೆ. ಪ್ರತಿ ವರ್ಷ ವಿದ್ಯಾರ್ಥಿ ಸಮುದಾಯ ಎದುರಿಸುವ ಈ ಸಮಸ್ಯೆ ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪುಸ್ತಕವೊಂದನ್ನು ಹೊರತಂದಿದ್ದಾರೆ. ವಿದ್ಯಾರ್ಥಿಗಳಿಗಾಗಿ 25 ಮಂತ್ರಗಳು, ಪೋಷಕರು ಹಾಗೂ ಶಿಕ್ಷಕರಿಗೆ ಉಪಯುಕ್ತ ಸಲಹೆಗಳು ಮತ್ತು ಮಕ್ಕಳಿಗೆ ಪರೀಕ್ಷೆ ವೇಳೆ ಅನುಕೂಲವಾಗಬಲ್ಲ ಯೋಗ ಆಸನಗಳನ್ನು ಈ ಪುಸ್ತಕದಲ್ಲಿ ಅವರು ಪ್ರಕಟಿಸಿದ್ದಾರೆ.

ಒತ್ತಡರಹಿತವಾಗಿ ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ದೇಶದ ಮುಖ್ಯಸ್ಥರೊಬ್ಬರು ಇಂತಹ ಪ್ರಯತ್ನಕ್ಕೆ ಮುಂದಾಗಿರುವುದು ಪ್ರಾಯಶಃ ಇದೇ ಮೊದಲು. ‘ಎಕ್ಸಾಮ್ ವಾರಿಯರ್ಸ್‌’ (ಪರೀಕ್ಷಾ ಸಿಪಾಯಿಗಳು) ಹೆಸರಿನ ಪುಸ್ತಕ ಇದಾಗಿದೆ. ಪೆಂಗ್ವಿನ್  ರ್ಯಾಂಡಮ್ ಹೌಸ್ ಪ್ರಕಾಶನ ಸಂಸ್ಥೆ ಹೊರತಂದಿದ್ದು, ಶನಿವಾರ ಸಚಿವರಾದ ಪ್ರಕಾಶ ಜಾವಡೇಕರ್ ಹಾಗೂ ಸುಷ್ಮಾ ಸ್ವರಾಜ್ ಬಿಡುಗಡೆ ಮಾಡಿದರು.

‘ನವಭಾರತದ ಯುವಕರಿಗೆ’ ಮೋದಿ ಈ ಪುಸ್ತಕವನ್ನು ಅರ್ಪಣೆ ಮಾಡಿದ್ದು, ‘ನರೇಂದ್ರ ಮೋದಿ’ ಮೊಬೈಲ್ ಆ್ಯಪ್ ಜತೆಗೂ ಈ ಪುಸ್ತಕ ಯೋಜನೆಗೊಂಡಿದೆ. ವಿದ್ಯಾರ್ಥಿಗಳು ಈ ಆ್ಯಪ್‌ನಲ್ಲಿ ತಮ್ಮ ಪರೀಕ್ಷಾ ಅನುಭವವನ್ನು ಹೇಳಿಕೊಳ್ಳಬಹುದು. ಮತ್ತೊಬ್ಬರ ಅನುಭವದಿಂದ ಸ್ಫೂರ್ತಿ ಪಡೆಯಬಹುದು.

‘ಪರೀಕ್ಷೆಗಳು ಹಬ್ಬವಿದ್ದಂತೆ’ ಎಂಬ ಮಂತ್ರದೊಂದಿಗೆ 25 ಮಂತ್ರಗಳ ಈ ಪುಸ್ತಕ ಆರಂಭವಾಗುತ್ತದೆ. ಪ್ರತಿ ಅಧ್ಯಾ ಯದ ಅಂತ್ಯದಲ್ಲೂ ವಿದ್ಯಾರ್ಥಿಗಳಿಗೆ ಒಂದೊಂದು ಚಟುವಟಿಕೆ ನೀಡಲಾಗಿದೆ. ‘ಇದು ನಿಮ್ಮ ಸಮಯ- ಚೆನ್ನಾಗಿ ಬಳಸಿ ಕೊಳ್ಳಿ’ ಎಂಬ ಅಧ್ಯಾಯದ ನಂತರ 24  ತಾಸನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದರ ಕುರಿತು ವೇಳಾಪಟ್ಟಿ ತಯಾರಿಸಿ ಕೊಳ್ಳುವ ಚಟುವಟಿಕೆ ನೀಡಲಾಗಿದೆ.

ಮಕ್ಕಳಿಂದ ನಿರೀಕ್ಷೆ ಮಾಡುವ ಬದಲು ಇರುವುದನ್ನು ಒಪ್ಪಿಕೊಳ್ಳಿ ಎಂದು ಪೋಷಕರಿಗೆ ಮೋದಿ ಕಿವಿ ಮಾತು ಹೇಳಿದ್ದಾರೆ. ಮಕ್ಕಳು ಅವರು ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಸಬಲೀಕರಣ ಮಾಡಿ. ಪ್ರೇರಣೆಗೊಳಿಸಿ ಎಂದು ಶಿಕ್ಷಕರಿಗೂ ಸಲಹೆ ಮಾಡಿದ್ದಾರೆ. ಪರೀಕ್ಷೆಗೆ ತಯಾರಾಗುವುದರ ಜತೆಗೆ ಆಟ, ನಿದ್ರೆ ಹಾಗೂ ಪ್ರಯಾಣಕ್ಕೂ ಒತ್ತು ನೀಡುವ ಅಂಶಗಳನ್ನು ಮೋದಿ ಬರೆದಿದ್ದಾರೆ. ಉತ್ತಮ ವಿಷಯ ಪ್ರಸ್ತುತಪಡಿಸುವುದು ತುಂಬಾ ಮುಖ್ಯವಾಗುತ್ತದೆ ಎಂದೂ ಹೇಳಿದ್ದಾರೆ.

Follow Us:
Download App:
  • android
  • ios