ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಸಂಕ್ರಾಂತಿಗೆ ಶುಭಾಷಯ ಕೋರಿದ್ದಾರೆ.
ಸೊಲ್ಲಾಪುರ[ಜ.10]: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.
ಕರ್ನಾಟಕ ಗಡಿಯ ಸೊಲ್ಲಾಪುರದಿಂದ ಒಸ್ಮಾನಾಬಾದ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 211ರ ಚತುಷ್ಪಥ ಲೋಕಾರ್ಪಣೆ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದ ಅವರು, ತಮ್ಮ ಭಾಷಣದ ಮಧ್ಯೆ ಕನ್ನಡದಲ್ಲಿ ಮಾತನಾಡುತ್ತಾ, ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಎಳ್ಳು ಬೆಲ್ಲ ತಿನ್ನಿ ಸಿಹಿ ಮಾತನಾಡಿ ಎಂದು ಹಾರೈಸಿದರು.
ಸೊಲ್ಲಾಪುರ ಮಹಾರಾಷ್ದಟ್ಲ್ಲಿರದಲ್ಲಿದ್ದರೂ ಇಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ ಎಂಬುವುದು ಗಮನಾರ್ಹ.
