ರಷ್ಯಾಕ್ಕೆ ಇಂದು ಮೋದಿ ಭೇಟಿ

PM Narendra Modi Visits Russia today
Highlights

ಏಪ್ರಿಲ್ ಅಂತ್ಯದಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಷ್ಯಾಕ್ಕೆ ಒಂದು ದಿನದ ಭೇಟಿ ಕೈಗೊಳ್ಳಲಿದ್ದಾರೆ. ‘ಅಜೆಂಡಾರಹಿತ’ ಪ್ರವಾಸ ಇದಾಗಿದೆ ಎಂಬುದು ಗಮನಾರ್ಹ.
 

ನವದೆಹಲಿ (ಮೇ. 21): ಏಪ್ರಿಲ್ ಅಂತ್ಯದಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಷ್ಯಾಕ್ಕೆ ಒಂದು ದಿನದ ಭೇಟಿ ಕೈಗೊಳ್ಳಲಿದ್ದಾರೆ. ‘ಅಜೆಂಡಾರಹಿತ’ ಪ್ರವಾಸ ಇದಾಗಿದೆ ಎಂಬುದು ಗಮನಾರ್ಹ.

ರಷ್ಯಾದ ಸೋಚಿ ನಗರವನ್ನು ಇಂದು ತಲುಪಲಿರುವ ಪ್ರಧಾನಿ ಅವರು, ಅಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ. ಜಾಗತಿಕ ಹಾಗೂ ಪ್ರಾದೇಶಿಕ ವಿಷಯಗಳು ಈ ಸಂದರ್ಭದಲ್ಲಿ ಚರ್ಚೆಗೆ ಬರಲಿವೆ. ಅದರಲ್ಲೂ ವಿಶೇಷವಾಗಿ ಇರಾನ್ ಜತೆಗಿನ ಅಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದ್ದು, ಅದರಿಂದ ಭಾರತ ಹಾಗೂ ರಷ್ಯಾ ಮೇಲಾಗುವ ಸಂಭಾವ್ಯ ಪರಿಣಾಮಗಳ ಕುರಿತಂತೆಯೂ ಚರ್ಚೆ ನಡೆಯಲಿದೆ.

ರಷ್ಯಾ ಪ್ರವಾಸಕ್ಕೂ ಮುನ್ನ ಭಾನುವಾರ ಟ್ವೀಟ್ ಮಾಡಿರುವ ಮೋದಿ ಅವರು, ಪುಟಿನ್ ಜತೆಗಿನ ಮಾತುಕತೆಯಿಂದ ಭಾರತ ಹಾಗೂ ರಷ್ಯಾ ನಡುವಣ ವಿಶೇಷ, ಸವಲತ್ತಿನ ವ್ಯೆಹಾತ್ಮಕ ಪಾಲುದಾರಿಕೆ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸ ತಮಗಿದೆ ಎಂದಿದ್ದಾರೆ.  

loader