'ನಾನು ಆ್ಯಪ್‌'ನಲ್ಲಿ ಗುಡ್ ಮಾರ್ನಿಂಗ್ ಸಂದೇಶ ಕಳುಹಿಸಿದರೆ ಅದಕ್ಕೆ ಐದಾರು ಸಂಸದರನ್ನು ಹೊರತುಪಡಿಸಿ ಉಳಿದವರಾರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ಹೊರಹಾಕಿದ್ದಾರೆ.
ನವದೆಹಲಿ (ಡಿ.29): 'ನಾನು ಆ್ಯಪ್ನಲ್ಲಿ ಗುಡ್ ಮಾರ್ನಿಂಗ್ ಸಂದೇಶ ಕಳುಹಿಸಿದರೆ ಅದಕ್ಕೆ ಐದಾರು ಸಂಸದರನ್ನು ಹೊರತುಪಡಿಸಿ ಉಳಿದವರಾರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ಹೊರಹಾಕಿದ್ದಾರೆ.
ಸಂಸತ್ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಂಸದರಿಗೆ ‘ನರೇಂದ್ರ ಮೋದಿ ಆ್ಯಪ್’ ಅನ್ನು ಸಕ್ರಿಯವಾಗಿ ಬಳಸುವಂತೆ ಸೂಚಿಸಿದರು. ಮುಂಜಾನೆಯ ಶುಭಾಶಯದೊಂದಿಗೆ ನಾನು ಮಹತ್ವದ ಸಂದೇಶಗಳನ್ನು ಕಳುಹಿಸುತ್ತೇನೆ. ಆದರೆ, ಅದನ್ನು ಬಹುತೇಕರು ಗಮನಿಸುವುದೇ ಇಲ್ಲ. ಆ್ಯಪ್ ಅನ್ನು ಎಲ್ಲರೂ ಸಕ್ರಿಯವಾಗಿ ಬಳಸುವಂತೆ ಕಿವಿಮಾತು ಹೇಳಿದರು.
