ನವದೆಹಲಿ[ಮೇ 20] : ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ಕೇದಾರನಾಥ ಯಾತ್ರೆಯಲ್ಲಿದ್ದಾರೆ. ಕೇದಾರನಾಥದಲ್ಲಿರುವ ಮೋದಿ ಫೋಟೋಗಳು ಸದ್ಯ ಸಾಮಾಝಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹೀಗಿರುವಾಗಲೇ ಮೋದಿ ಯಾತ್ರೆ ಕುರಿತಾಗಿ ಪರ ವಿರೋಧಗಳೂ ವ್ಯಕ್ತವಾಗಿದೆ. ಅದರಲ್ಲೂ ವಿಶೇಷವಾಗಿ ಮೋದಿ ಧ್ಯಾನಕ್ಕೆಂದು ಕುಳಿತಿದ್ದ ಗುಹೆಯಲ್ಲಿ ಹ್ಯಾಂಗರ್, ಬೆಡ್ ಇದೆ ಎಂಬ ವಿಚಾರ ಭಾರೀ ಸದ್ದು ಮಾಡಿತ್ತು ಹಾಗೂ ಮೋದಿ ಕೇವಲ ತೋರಿಕೆಯ ಧ್ಯಾನ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿತ್ತು. ಆದರೀಗ ಖುದ್ದು ಮೋದಿ ಟ್ವೀಟ್ ಮಾಡಿರುವ ಫೋಟೋ ಒಂದು ಟೀಕಿಸಿದವರಿಗೆ ಎದುರೇಟು ನೀಡಿದಂತಿದೆ.

ಫಲಿತಾಂಶವೆಲ್ಲಾ ಶೂನ್ಯ: ಕೇದಾರನಾಥ್ ಸನ್ನಿಧಿಯಲ್ಲಿ ಮೋದಿ ಧ್ಯಾನ!

ಹೌದು ಮೋದಿ ಕೇದರನಾಥದ ಗುಹೆಯಲ್ಲಿ ಎಲ್ಲಾ ರೀತಿಯ ತಯಾರಿ ನಡೆಸಿ ಧ್ಯಾನಕ್ಕೆ ಕುಳಿತಿದ್ದಾರೆ ಎಂದು ಅರೋಪಿಸಿದವರಿಗೆಲ್ಲಾ ತಕ್ಕ ಉತ್ತರ ನೀಡಿದಂತಿದೆ ಮೋದಿ ಟ್ವೀಟ್ ಮಾಡಿರುವ ಫೋಟೋ. ಈ ಚಿತ್ರದಲ್ಲಿ ಮೋದಿ ಎಲ್ಲಾ ಸೌರ್ಯಗಳಿರುವ ಯಾವುದೋ ಗುಹೆಯಲ್ಲಿಲ್ಲ. ಬದಲಾಗಿ ಹಿಮಾಲಯ ತಪ್ಪಲಲ್ಲಿ, ಹಿಮದಿಂದಾವೃತ ಪ್ರದೇಶದಲ್ಲಿ ಕುಳಿತಿರುವ ಮೋದಿ, ಕೊರೆಯುವ ಚಳಿ ನಡುವೆಯೂ ಕೇಸರಿ ಶಾಲನ್ನು ಹೊದ್ದು ಅತ್ಯಂತ ತನ್ಮಯತೆಯಿಂದ ಧ್ಯಾನ ಮಾಡುತ್ತಿರುವ ಚಿತ್ರವದು. 

ಈ ಕುರಿತಾಗಿ ಬರೆದುಕೊಂಡಿರುವ ಪ್ರಧಾನಿ ಮೋದಿ 'ಅಮೋಘ, ವೈಭವೋಪೇತ. ಪ್ರಶಾಂತತೆ ಹಾಗೂ ಆಧ್ಯಾತ್ಮಿಕತೆಯ ಆಗರ. ಈ ಹಿಮಾಲಯದಲ್ಲಿ ಅದೇನೋ ವಿಶೇಷತೆ ಇದೆ. ಹಿಮಾಲಯದ ಬೆಟ್ಟಕ್ಕೆ ಮರಳುವುದರಲ್ಲಿ ಏನೋ ವಿಶಿಷ್ಟ ಬಗೆಯ ಆನಂದವಿದೆ' ಎಂದಿದ್ದಾರೆ.

ಮೋದಿ ಧ್ಯಾನ ಮಾಡಿದ ಗುಹೆಯಲ್ಲಿ ಆಧುನಿಕ ಸೌಲಭ್ಯಗಳು!

ಈಗಾಗಲೇ ಗುಹೆಯಲ್ಲಿರುವ ಫೋಟೋ ಪ್ರತಿಪಕ್ಷಗಳು ಟ್ರೋಲ್ ಮಾಡಿದ್ದು, ಈ ಟ್ವೀಟ್ ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಕಾದು ನೊಡಬೇಕು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.