ಲೋಕಸಭೆ ಚುನಾವಣೆಯ ಫಲಿತಾಂಶದ ನಿರೀಕ್ಷೆಯಲ್ಲಿ ದೇಶ| ತಮ್ಮ ಭವಿಷ್ಯದ ಕುರಿತು ತಲೆಕೆಡಿಸಿಕೊಂಡಿರುವ ರಾಜಕೀಯ ಪಕ್ಷಗಳು| ಲೋಕಸಭೆ ಚುನಾವಣೆಯ ಬಳಲಿಕೆ ದೂರ ಮಾಡಿದ ಪ್ರಧಾನಿ ಮೋದಿ| ಕೇದಾರನಾಥ್ ಸನ್ನಿಧಿಯಲ್ಲಿ ಪ್ರಧಾನಿ ಮೋದಿಯಿಂದ ಧ್ಯಾನ| ಕೇದಾರನಾಥ್ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಮೋದಿ| ದೇಗುಲದಿಂದ ದೂರವಿರುವ ಗುಹೆಯಲ್ಲಿ ಕುಳಿತು ಪ್ರಧಾನಿ ಧ್ಯಾನ|
ಕೇದಾರನಾಥ(ಮೇ.18): ಇಡೀ ದೇಶ ಲೋಕಸಭೆ ಚುನಾವಣೆಯ ಫಲಿತಾಂಶದ ದಿನಕ್ಕಾಗಿ ಕಾತರದಿಂದ ಕಾಯುತ್ತಿದೆ. ಫಲಿತಾಂಶದ ಬಳಿಕ ಏನಾಗಲಿದೆ ಎಂಬ ಕುತೂಹಲ ಎಲ್ಲಾ ರಾಜಕೀಯ ಪಕ್ಷಗಳಿಂದ ಹಿಡಿದು ಜನಸಾಮಾನ್ಯರಲ್ಲಿಯೂ ಇದೆ.
"
ಆದರೆ ಲೋಕಸಭೆ ಚುನಾವಣೆಗಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿರುವ ಪ್ರಧಾನಿ ಮೋದಿ, ಕೇದಾರನಾಥ್ ಸನ್ನಿಧಿಯಲ್ಲಿ ಧ್ಯಾನದಲ್ಲಿ ನಿರತರಾಗುವ ಮೂಲಕ ತಮ್ಮ ಬಳಲಿಕೆಯನ್ನು ದೂರ ಮಾಡಿದ್ದಾರೆ.
ಇಂದು ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ದೇಗುಲದಿಂದ ದೂರವಿರುವ ಗುಹೆಯಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ.
ಇದಕ್ಕೂ ಮೊದಲು ಕೇದಾರನಾಥ್ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಮೋದಿ, ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಧ್ಯಾನ ಮಾಡಲು ಗುಹೆಯತ್ತ ತೆರಳಿದರು.
2019 ರ ಲೋಕಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ-ಬದ್ರಿನಾಥ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುಜರಾತ್ ನಲ್ಲಿರುವ ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
