ಹಾರ್ವರ್ಡ್ ಥಿಂಕಿಂಗ್ ಗಿಂತ ಹಾರ್ಡ್ ವರ್ಕ್ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ಥ್ಯ ಸೇನ್ ಗೆ ಕಟುಕಿದ್ದಾರೆ.
ಮಹಾರಾಜ್ ಗಂಜ್ (ಮಾ.01): ಹಾರ್ವರ್ಡ್ ಥಿಂಕಿಂಗ್ ಗಿಂತ ಹಾರ್ಡ್ ವರ್ಕ್ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ಥ್ಯ ಸೇನ್ ಗೆ ಕಟುಕಿದ್ದಾರೆ.
ನೋಟುನಿಷೇಧವನ್ನು ಕಟುವಾಗಿ ಟೀಕಿಸಿ. ಆಡಳಿತಾರೂಢ ಬಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಅಮಾರ್ತ್ಯ ಸೇನ್ ಹೆಸರನ್ನು ಹೇಳದೇ, ನಮ್ಮ ಯೋಚನೆಗಿಂತ ನಾವು ಮಾಡುವ ಕೆಲಸ ಮುಖ್ಯ ಎಂದು ಹೇಳಿದ್ದಾರೆ.
ಹಾರ್ವರ್ಡ್ ಮತ್ತು ಹಾರ್ಡ್ ವರ್ಕ್ ನಡುವಿನ ವ್ಯತ್ಯಾಸವನ್ನು ದೇಶ ನೋಡಿದೆ.ಅವರು ಹಾರ್ವರ್ಡ್ ಜನರು ಏನನ್ನುತ್ತಾರೆ ಅಂತ ಒಂದು ಕಡೆ ಹೇಳಿದರೆ ಇನ್ನೊಂದು ಕಡೆ ಬಡ ರೈತನ ಮಗ ಆರ್ಥಿಕ ಅಭಿವೃದ್ಧಿಗಾಗಿ ಕಷ್ಟಪಟ್ಟು ದುಡಿಯುತ್ತಿರುತ್ತಾನೆ ಎಂದು ಉತ್ತರ ಪ್ರದೇಶ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೂಡಾ ಕಿಡಿಕಾರಿದ್ದಾರೆ. ಲಂಡನ್ನಿನಲ್ಲಿ ತೆಂಗಿನಕಾಯಿ ಜ್ಯೂಸ್ (ಎಳನೀರು) ಮಾರಲು ಇಚ್ಚಿಸುತ್ತೇನೆ ಎನ್ನುವ ರಾಹುಲ್ ಹೇಳಿಕೆಗೆ ಪ್ರತಿಯಾಗಿ ತೆಂಗಿನಕಾಯಿಯೊಳಗೆ ನೀರಿರುವುದು ಚಿಕ್ಕ ಮಕ್ಕಳಿಗೂ ಗೊತ್ತಿರುವ ವಿಚಾರ. ಅದರಲ್ಲಿರುವ ಸಾರವನ್ನು ತೆಗೆಯಲು ಹೇಗೆ ಸಾಧ್ಯ? ಲಂಡನ್ನಿನಲ್ಲಿ ಯಾರು ತೆಂಗಿನಕಾಯಿ ಮಾರುತ್ತಾರೋ ಅವರು ಉತ್ತರಪ್ರದೇಶದಲ್ಲಿ ಆಲೂಗಡ್ಡೆ ಫ್ಯಾಕ್ಟರಿಯನ್ನು ಸ್ಥಾಪಿಸುತ್ತಾರೆ. ಇಂತಹ ಬುದ್ಧಿವಂತರನ್ನು ಕಾಂಗ್ರೆಸ್ ಹೊಂದಿದೆ ಎಂದು ಮೋದಿ ಲೇವಡಿ ಮಾಡಿದ್ದಾರೆ.
