ಪ್ರಧಾನಿ ಮೋದಿ ಬಟ್ಟೆಗೆ ಸರ್ಕಾರದ ಹಣ ವೆಚ್ಚ ಮಾಡಲ್ಲ..

news | Saturday, January 13th, 2018
Suvarna Web Desk
Highlights

ಪ್ರಧಾನಿ ನರೇಂದ್ರ ಮೋದಿಯವರು ದಿನದಲ್ಲಿ ಹಲವು ಬಾರಿ ಬಟ್ಟೆ ಬದಲಾಯಿಸುವ ಬಗ್ಗೆ ಸಾಕಷ್ಟು ಮಂದಿ ಕುಹಕವಾಡು ವುದಿದೆ. ಇಷ್ಟೊಂದು ಬಟ್ಟೆಗಳಿಗೆ ಸರ್ಕಾರದ ಹಣವೆಚ್ಚವಾಗುತ್ತಿದೆ ಎಂಬರ್ಥದ ಮಾತುಗಳೂ ಕೇಳಿಬರುತ್ತಿರುತ್ತವೆ. ಆದರೆ ಇತ್ತೀಚಿನ ಆರ್‌ಟಿಐ ಅರ್ಜಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಧಾನಿ ಮೋದಿಯವರ ಬಟ್ಟೆಗಳಿಗೆ ಸ್ವತಃ ಅವರೇ ವ್ಯಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದಿನದಲ್ಲಿ ಹಲವು ಬಾರಿ ಬಟ್ಟೆ ಬದಲಾಯಿಸುವ ಬಗ್ಗೆ ಸಾಕಷ್ಟು ಮಂದಿ ಕುಹಕವಾಡು ವುದಿದೆ. ಇಷ್ಟೊಂದು ಬಟ್ಟೆಗಳಿಗೆ ಸರ್ಕಾರದ ಹಣವೆಚ್ಚವಾಗುತ್ತಿದೆ ಎಂಬರ್ಥದ ಮಾತುಗಳೂ ಕೇಳಿಬರುತ್ತಿರುತ್ತವೆ.

ಆದರೆ ಇತ್ತೀಚಿನ ಆರ್‌ಟಿಐ ಅರ್ಜಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಧಾನಿ ಮೋದಿಯವರ ಬಟ್ಟೆಗಳಿಗೆ ಸ್ವತಃ ಅವರೇ ವ್ಯಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆರ್‌ಟಿಐ ಕಾರ್ಯಕರ್ತ ರೋಹಿತ್ ಸಭರ್ವಾಲ್ ಸಲ್ಲಿಸಿದ್ದ ಆರ್ ಟಿಐ ಅರ್ಜಿಗೆ ಪ್ರಧಾನಿ ಸಚಿವಾಲಯ ಸ್ಪಷ್ಟಪಡಿಸಿದ್ದು, ಪ್ರಧಾನಿಯವರ ಬಟ್ಟೆ ಬರೆಗಳಿಗೆ ಸರ್ಕಾರದಿಂದ ಪಾವತಿಸುವುದಿಲ್ಲ ಎಂದು ತಿಳಿಸಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಮೋದಿ ವರೆಗಿನ ಪ್ರಧಾನಿಗಳ ಬಟ್ಟೆಬರೆಗಳ ಖರ್ಚು ವಿವರ ಕೇಳಲಾಗಿತ್ತು. ಈ ವೇಳೆ ಸರ್ಕಾರದಿಂದ ಯಾವುದೇ ಹಣ ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Comments 0
Add Comment