ನೋಟು ಅಮಾನ್ಯ ಕ್ರಮದ ಬಗ್ಗೆ ನಾನು ಮಾತನಾಡಿದರೆ ಭೂಕಂಪವೇ ಸಂಭವಿಸಿಬಿಡುತ್ತದೆ ಎಂದಿದ್ದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ನವದೆಹಲಿ (ಡಿ. 22): ನೋಟು ಅಮಾನ್ಯ ಕ್ರಮದ ಬಗ್ಗೆ ನಾನು ಮಾತನಾಡಿದರೆ ಭೂಕಂಪವೇ ಸಂಭವಿಸಿಬಿಡುತ್ತದೆ ಎಂದಿದ್ದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿಗೆ ಭಾಷಣ ಮಾಡುವ ಕಲೆ ಕರಗತವಾಗಿರುವುದು ನನ್ನ ಸಂತೋಷಕ್ಕೆ ಮಿತಿಯೇ ಇಲ್ಲವೆಂದು ಎಂದು ಮೋದಿ ಹೇಳಿದ್ದಾರೆ.
ನಮ್ಮಲ್ಲಿ ಕೆಲವು ಯುವ ಮುಖಂಡರಿದ್ದಾರೆ. ಅವರು ಹೇಗೆ ಮಾತನಾಡಬೇಕೆಂದು ಕಲಿಯುತ್ತಿದ್ದಾರೆ. ಇದರಿಂದ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಅವರು ಮಾತನಾಡುತ್ತಿದ್ದಾರೆ ಹಾಗಾಗಿ ಭೂಕಂಪ ಸಂಭವಿಸಿಲ್ಲ ಎಂದು ರಾಹುಲ್ ಗಾಂಧಿ ಹೆಸರನ್ನು ಹೇಳದೇ ಮೋದಿ ಅಣಕವಾಡಿದ್ದಾರೆ.
ಪ್ರಧಾನಿ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲಿರುವ ಹಿಂದೂ ಬನಾರಸ್ ವಿವಿಯಲ್ಲಿ ಭಾಷಣ ಮಾಡುವ ವೇಳೆ ರಾಹುಲ್ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
