ಅಧಿಕಾರಕ್ಕೇರಿದ ಮೂರು ವರ್ಷಗಳ ಬಳಿಕವೂ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹಾಗೇ ಇದೆ. ಇಂಡಿಯಾ ಟುಡೆ ಕಾರ್ವಿ ಇನ್‍ಸೈಟ್ಸ್ ಸಹಯೋಗದಲ್ಲಿ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಇದನ್ನ ಸಾಬೀತು ಮಾಡಿದೆ. ದೇಶದಾದ್ಯಂತ 19 ರಾಜ್ಯಗಳ ಸುಮಾರು 12,178 ಜನರನ್ನ ಅಂದ್ರೆ 68% ಗ್ರಾಮೀಣ ಮತದಾರರು ಹಾಗೂ 32% ನಗರ ಮತದಾರರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಮೋದಿಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ. ಆದರೂ 53% ಮತದಾರರು ದೇಶದ ಉದ್ಯೋಗ ಸಮಸ್ಯೆಯೇ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಜನ ಭಾವಿಸಿದ್ದಾರೆ. ಆದ್ರೆ ಈ ಎಲ್ಲದರ ಮಧ್ಯೆ ಮೋದಿ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಗೃಹ ಸಚಿವ ರಾಜ್‍ನಾಥ್ ಸಿಂಗ್ ಮೋದಿ ಸಂಪುಟದ ಅತ್ಯುತ್ತಮ ಸಚಿವರು ಎಂದು ಜನ ವೋಟ್ ಮಾಡಿದ್ದಾರೆ.

ನವದೆಹಲಿ (ಆ.18): ಅಧಿಕಾರಕ್ಕೇರಿದ ಮೂರು ವರ್ಷಗಳ ಬಳಿಕವೂ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹಾಗೇ ಇದೆ. ಇಂಡಿಯಾ ಟುಡೆ ಕಾರ್ವಿ ಇನ್‍ಸೈಟ್ಸ್ ಸಹಯೋಗದಲ್ಲಿ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಇದನ್ನ ಸಾಬೀತು ಮಾಡಿದೆ. ದೇಶದಾದ್ಯಂತ 19 ರಾಜ್ಯಗಳ ಸುಮಾರು 12,178 ಜನರನ್ನ ಅಂದ್ರೆ 68% ಗ್ರಾಮೀಣ ಮತದಾರರು ಹಾಗೂ 32% ನಗರ ಮತದಾರರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಮೋದಿಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ. ಆದರೂ 53% ಮತದಾರರು ದೇಶದ ಉದ್ಯೋಗ ಸಮಸ್ಯೆಯೇ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಜನ ಭಾವಿಸಿದ್ದಾರೆ. ಆದ್ರೆ ಈ ಎಲ್ಲದರ ಮಧ್ಯೆ ಮೋದಿ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಗೃಹ ಸಚಿವ ರಾಜ್‍ನಾಥ್ ಸಿಂಗ್ ಮೋದಿ ಸಂಪುಟದ ಅತ್ಯುತ್ತಮ ಸಚಿವರು ಎಂದು ಜನ ವೋಟ್ ಮಾಡಿದ್ದಾರೆ.

ಈಗ ಚುನಾವಣೆ ನಡೆದರೆ ಗೆಲ್ಲೋದ್ಯಾರು?

ಸಮೀಕ್ಷೆ ಪ್ರಕಾರ ಇಂದು ಲೋಕಸಭೆ ಚುನಾವಣೆ ನಡೆದ್ರೆ ಎನ್‍ಡಿಎ 42% ಮತ ಹಾಗೂ 349 ಸೀಟ್‍ಗಳನ್ನ ಪಡೆಯಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 28% ಮತ ಹಾಗೂ 75 ಸೀಟ್‍ಗಳನ್ನ ಪಡೆಯಲಿದೆ ಅಂತ ಸಮೀಕ್ಷೆ ಹೇಳಿದೆ. ಇನ್ನು ಇತರೆ ಪಕ್ಷಗಳು 30% ಮತ ಹಾಗೂ 119 ಸೀಟ್‍ಗಳನ್ನ ಪಡೆಯಲಿವೆ ಎಂದು ಎಮ್‍ಓಟಿಎನ್ ಸಮೀಕ್ಷಾ ವರದಿ ಹೇಳಿದೆ.

ಪರ್ಯಾಯ ಪ್ರಧಾನ ಮಂತ್ರಿ ಅಭ್ಯರ್ಥಿ

ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಹೆಸರು ಅತ್ಯಂತ ಜನಪ್ರಿಯವಾಗಿ ಉಳಿದಿದೆ. ಆದ್ರೆ ಜನವರಿಯಲ್ಲಿ ನಡೆದ ಸಮೀಕ್ಷೆಗೆ ಹೋಲಿಸಿದ್ರೆ ಅಂದು 28% ಮತಗಳಿದ್ದು, ಈಗ 21% ಗೆ ಇಳಿದಿದೆ. ರಾಹುಲ್ ಗಾಂಧಿಯ ನಂತರ ನಿತೀಶ್ ಕುಮಾರ್‍ಗೆ 13%, ಸೋನಿಯಾ ಗಾಂಧಿಗೆ 12% ಹಾಗೂ ಅರವಿಂದ್ ಕೇಜ್ರಿವಾಲ್‍ಗೆ 7% ಮತ ಸಿಕ್ಕಿದೆ.

ಅತ್ಯಂತ ಜನಪ್ರಿಯ ಸಿಎಂ ಯಾರು?

ಸಮೀಕ್ಷೆಯ ಪ್ರಕಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯುತ್ತಮ ಸಿಎಂ. ಎರಡನೇ ಸ್ಥಾನದಲ್ಲಿ ಬಿಹಾರದ ನಿತೀಶ್ ಕುಮಾರ್ ಹಾಗೂ ಮೂರನೇ ಸ್ಥಾನದಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಇದ್ದಾರೆ.

ನಿತೀಶ್ ಕುಮಾರ್ ಯುಪಿಎ ಯಿಂದ ಎನ್‍ಡಿಎ ಗೆ ಬರುವ ಮುಂಚೆಯೇ ಈ ಸಮೀಕ್ಷೆ ನಡೆಸಿದ್ದರಿಂದ ಅದನ್ನ ರೀಕೋಡ್ ಮಾಡಿ ಅಪ್‍ಡೇಟ್ ಮಾಡಲಾಗಿದೆ. ನಂತರವೂ ಎನ್‍ಡಿಎಗೆ ಹೆಚ್ಚಿನ ಸೀಟ್ ಸಿಕ್ಕಿದೆ. ಎನ್‍ಡಿಎ, ಯುಪಿಎ ಮತ್ತು ಇತರೆ ಎಂದು ಮೂರು ಭಾಗಗಳಾಗಿದ್ದ ಫಲಿತಾಂಶ ಎನ್‍ಡಿಎ ಮತ್ತು ಯುಪಿಎ ನಡುವೆ ವಿಭಜನೆಯಾಗಿದೆ. ಈ ಮೂಲಕ ಎನ್‍ಡಿಎಗೆ 51% ಮತ ಹಾಗೂ 421 ಸೀಟ್‍ಗಳು ಅಭಿಸಿದ್ದು, ಯುಪಿಎಗೆ 43% ಮತ ಹಾಗು 120 ಸೀಟ್‍ಗಳು ಸಿಕ್ಕಿವೆ.

ಭಾರತೀಯರಾಗಿ ನೀವು ಹೆಮ್ಮೆ ಪಡಲು ಇರುವಂತಹ ಕಾರಣಗಳೇನು ಎಂಬ ಪ್ರಶ್ನೆಗೆ ಜನ, ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಧರ್ಮ ಹಾಗೂ ನಂಬಿಕೆಯನ್ನ ಪಾಲಿಸಲು ಇರುವ ಸ್ವಾತಂತ್ರ್ಯಗಳೇ ಮೂರು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಇನ್ನು ದೇಶದ ಬಗ್ಗೆ ಕೋಪಗೊಳ್ಳಲು ಕಾರಣಗಳನ್ನು ಕೇಳಿದಾಗ ರಾಜಕೀಯದಲ್ಲಿನ ಭ್ರಷ್ಟಾಚಾರ, ಧರ್ಮ/ಜಾತಿ ಆಧಾರದ ಮೇಲೆ ಮತ ಚಲಾಯಿಸುವುದು ಹಾಗೂ ಕೋಮುವಾದ ಎಂದು ಉತ್ತರಿಸಿದ್ದಾರೆ. 49% ಜನ ದೇಶದಲ್ಲಿ ರಾಜಕಾರಣಿಗಳೇ ಅತ್ಯಂತ ಭ್ರಷ್ಟರು ಎಂದು ವೋಟ್ ಮಾಡಿದ್ದರೆ, 21% ಜನ ಪೊಲೀಸರು ಭ್ರಷ್ಟರೆಂದು ಅಭಿಪ್ರಯಾಪಟ್ಟಿದ್ದಾರೆ.

ಇನ್ನು ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ 35% ಜನ ಗಡಿಯಾಚೆಗಿನ ಭಯೋತ್ಪಾದನೆ ದೇಶಕ್ಕೆ ಅತ್ಯಂತ ದೊಡ್ಡ ಆತಂಕ ಎಂದಿದ್ದಾರೆ. ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 23% ಜನ ಭಾರತ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದರೆ, 7% ಜನ ನಾವು ಯುದ್ಧ ಮಾಡಬೇಕು ಎಂದು ಹೇಳಿದ್ದಾರೆ.