ಒಂದು ವೇಳೆ ಈ ಇಬ್ಬರು ನಾಯಕರು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲಿ, ದೇಶದ ಆರ್ಥಿಕ ಕುಸಿತ ಸಂಬಂಧವಾಗಿ ಪರಸ್ಪರ ಒಬ್ಬರಿಗೊಬ್ಬರ ವಿರುದ್ಧ ಟೀಕೆ ಮಾಡಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಯಶವಂತ ಸಿನ್ಹಾ ಅವರು ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಭಾಗವಹಿಸಿದಂತಾಗಲಿದೆ.
ಪಟನಾ(ಅ.08): ದೇಶದ ಆರ್ಥಿಕತೆಗೆ ಸಂಬಂಧಿಸಿದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರಣಿ ಟೀಕೆ ಮಾಡುತ್ತಿರುವ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ, ಶೀಘ್ರವೇ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾದ್ಯತೆ ಇದೆ.
ಅ.14ರಂದು ಪಟನಾ ವಿವಿಯ ಶತಮಾನೋತ್ಸವ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ನಮ್ಮ ಆಹ್ವಾನವನ್ನು ಪ್ರಧಾನಿ ಕಾರ್ಯಾಲಯ ಪುರಸ್ಕರಿಸಿದೆ. ಅಲ್ಲದೆ, ವಿವಿಯ ಹಳೇ ವಿದ್ಯಾರ್ಥಿಯಾಗಿರುವ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಅವರಿಗೂ ಆಹ್ವಾನಿಸಲಾಗಿದೆ ಎಂದು ವಿವಿ ಕುಲ ಪತಿ ರಾಶ್ ಬಿಹಾರಿ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.