ನೋಟ್ ರದ್ದಿನಿಂದ ಕಾಳಸಂತೆಕೋರರ ಜೊತೆ ಜನ ಸಾಮಾನ್ಯರಿಗೂ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಇವರೆಲ್ಲರ ಜೊತೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಗೂ ನಷ್ಟವಾಗಿದೆ.
ನವದೆಹಲಿ(ನ.11):ಕಪ್ಪು ಹಣ, ಕಾಳಸಂತೆಕೋರರ ಮಟ್ಟ, ನಕಲಿ ನೋಟು ನಿಯಂತ್ರಣ ಮುಂತಾದ ಕಾರಣಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1000 ರೂ. ನೋಟುಗಳನ್ನು ಕಳೆದ 2 ದಿನಗಳ ಹಿಂದೆ ದೇಶದಾದ್ಯಂತ ರದ್ದು ಮಾಡಿದ್ದರು.
ನೋಟ್ ರದ್ದಿನಿಂದ ಕಾಳಸಂತೆಕೋರರ ಜೊತೆ ಜನ ಸಾಮಾನ್ಯರಿಗೂ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಇವರೆಲ್ಲರ ಜೊತೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಗೂ ಸಂಕಷ್ಟವಾಗಿದೆ. ಅದೇನಂತೀರಾ ನೋಟು ರದ್ದುಗೊಳಿಸಿದ ನಂತರದ ದಿನ ಪ್ರಧಾನಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಟ್ವಿಟರ್ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ.ಸರಿ ಸುಮಾರು 2.5 ಕೋಟಿ ಅನುಯಾಯಿಗಳಿದ್ದರು. ರದ್ದು ಮಾಡಿದ ದಿನದಲ್ಲಿ 3,13,312 ಅನುಯಾಯಿಗಳನ್ನು ಕಳೆದುಕೊಂಡರು.
ಆದ್ಯಾಗಿಯು ಅದರ ನಂತರದ ದಿನದಲ್ಲೇ 4.3 ಲಕ್ಷ ಹೊಸ ಅನುಯಾಯಿಗಳು ಮೋದಿಯವರನ್ನು ಫಾಲೋ ಮಾಡಿದ್ದಾರೆ. ಟ್ವಿಟರ್ ಸಂಸ್ಥೆಯ ಪ್ರಕಾರ ನಿತ್ಯ ಮೋದಿಯವರನ್ನು 20 ರಿಂದ 25 ಸಾವಿರ ಅನುಯಾಯಿಗಳು ಸೇರ್ಪಡೆಯಾಗುತ್ತಿದ್ದರು. ಆದರೆ 2 ದಿನದಲ್ಲೇ ಆಗಿರುವ ಹೊಸ ಬದಲಾವಣೆಗಳು ತಾಂತ್ರಿಕ ಕಾರಣದಿಂದ ಆಗಿರುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಟ್ವಿಟರ್ ಸಂಸ್ಥೆಯ ಅಧಿಕಾರಿಗಳು.
