ನವದೆಹಲಿ (ಡಿ. 11): ಕಳೆದ ವಾರ ದಿಲ್ಲಿಯಲ್ಲೊಂದು ಆಸಕ್ತಿಕರ ಘಟನೆ ನಡೆಯಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಸುಪ್ರೀಂಕೋರ್ಟ್‌ನಲ್ಲಿ ಆಯೋಜಿಸಿದ್ದ ರಾತ್ರಿಯ ಭೋಜನಕ್ಕೆ ಔಪಚಾರಿಕತೆಗೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸಿದ್ದರು. 

ಮೋದಿ ಅಕ್ಷರಶ: ಏಕಾಂಗಿ: ಕೈ ಕೊಟ್ಟ ಮತ್ತೋರ್ವ ಸಹವರ್ತಿ!

ಬಹುತೇಕ ನ್ಯಾಯಮೂರ್ತಿಗಳ ಕುಟುಂಬ ವರ್ಗದವರೇ ಭಾಗವಹಿಸುವ ಈ ಡಿನ್ನರ್‌ಗೆ ಪ್ರತಿ ವರ್ಷ ಪ್ರಧಾನಿಯನ್ನು ಕರೆಯಲಾಗುತ್ತದೆ. ಆದರೆ ಯಾವ ಪ್ರಧಾನಿಯೂ ಬರುವುದಿಲ್ಲ. ಆದರೆ ಈ ಬಾರಿ ಡಿನ್ನರ್ ಆರಂಭವಾಗುತ್ತಿದ್ದಂತೆ ಪ್ರತ್ಯಕ್ಷರಾದ ಪ್ರಧಾನಿ ಮೋದಿ, ಮುಖ್ಯ ನ್ಯಾಯಮೂರ್ತಿಗಳ ಜೊತೆ ಕುಳಿತು ಹರಟೆ ಹೊಡೆಯುತ್ತಾ ಊಟ ಮಾಡಿದರು. 

ಸ್ವಚ್ಛತೆ ಕಾಪಾಡದ ಸದಸ್ಯೆ ಬೇಕಾ? ಮಂಡ್ಯದಿಂದ ಮೋದಿಗೆ ಮಾದೇಗೌಡ ಪತ್ರ

ರಾತ್ರಿ 9 ಗಂಟೆ ಆಯಿತು. ಇನ್ನೇನು ಪ್ರಧಾನಿಗಳು ಹೊರಡುತ್ತಾರೆ ಎನ್ನುವಾಗ ಜಸ್ಟಿಸ್ ಗೊಗೋಯಿ ಬಳಿ ಬಂದ ಮೋದಿ ಸಾಹೇಬರು, ‘ನಾನು ಮುಖ್ಯ ನ್ಯಾಯಮೂರ್ತಿಗಳು ಕುಳಿತುಕೊಳ್ಳುವ ಕೋರ್ಟ್ ನಂಬರ್ 1 ನೋಡಬೇಕು’ ಎಂದು ಹೇಳಿದರು. ಕೂಡಲೇ ಚೌಕಿದಾರರನ್ನು ಕರೆಸಿದ ಮುಖ್ಯ ನ್ಯಾಯಮೂರ್ತಿಗಳು ಪ್ರಧಾನಿಯನ್ನು ಅಲ್ಲಿಗೆ ಕರೆದುಕೊಂಡು ಹೋದರು.

ವೀಕ್ಷಕರು ಕುಳಿತುಕೊಳ್ಳುವ ಮೊದಲನೇ ಸಾಲಿನಲ್ಲಿ ಕೂತು ಸುಪ್ರೀಂಕೋರ್ಟ್ ಕೆಲಸ ಮಾಡುವ ವಿಧಾನವನ್ನು ತಿಳಿದುಕೊಂಡ ಪ್ರಧಾನಿ ರಾತ್ರಿ 11.30 ಕ್ಕೆ ಇನ್ನೊಂದು ಕಪ್ ಬಿಸಿ ಬಿಸಿ ಚಹಾ ಕುಡಿದು ಅಲ್ಲಿಂದ ತೆರಳಿದರಂತೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ