ಮೋದಿ ಕ್ಯಾಂಪ್ ನಿಂದ ಮತ್ತೋರ್ವ ಸದಸ್ಯ ಹೊರಕ್ಕೆ| ಪ್ರಧಾನಿ ನರೇಂದ್ರ ಮೋದಿ ಇದೀಗ ಅಕ್ಷರಶಃ ಏಕಾಂಗಿ| ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿಗೆ ಸುರ್ಜಿತ್ ಭಲ್ಲಾ ರಾಜೀನಾಮೆ| ತಾತ್ಕಾಲಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸುರ್ಜಿತ್ ಭಲ್ಲಾ
ನವದೆಹಲಿ(ಡಿ.11): ದೇಶದ ಆರ್ಥಿಕ ನೊಗ ಹೊತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತವರ ತಂಡ ಇದೀಗ ಭಾರೀ ಸಂಕಷ್ಟ ಎದುರಿಸುತ್ತಿದೆ. ಕಾರಣ ಮೋದಿ ತಂಡದಿಂದ ಒಬ್ಬೊಬ್ಬರಾಗಿ ಹೊರ ಹೋಗುತ್ತಿದ್ದು, ಮೋದಿ ಏಕಾಂಗಿಯಾಗುತ್ತಿದ್ದಾರೆ.
ನಿನ್ನೆಯಷ್ಟೇ ಆರ್‌ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದರು. ಇದೀಗ ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯರಾಗಿದ್ದ ಸುರ್ಜಿತ್ ಭಲ್ಲಾ ರಾಜೀನಾಮೆ ನೀಡಿದ್ದಾರೆ.
ಹೌದು, ಅಪನಗದೀಕರಣ ಮತ್ತು ಜಿಎಸ್ ಟಿ ಜಾರಿ ವೇಳೆ ಮೋದಿ ಅವರನ್ನು ಹಾಡಿ ಹೊಗಳಿ ಅಟ್ಟಕ್ಕೆ ಏರಿಸಿದ್ದ ಸುರ್ಜಿತ್ ಭಲ್ಲಾ, ಇದೀಗ ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿಯಿಂದ ಹೊರ ಬಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಭಲ್ಲಾ, ವೈಯಕ್ತಿಕ ಕಾರಣಗಳಿಂದಾಗಿ ಆರ್ಥಿಕ ಸಲಹಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
