ಮೋದಿಯಿಂದ ಸ್ಫೂರ್ತಿಗೊಂಡ ಜಡೇಜಾ : ಮುಂದೇನಾಯ್ತು ಗೊತ್ತಾ ?
ಆ್ಯಂಟಿಗುವಾ(ಜೂ.30): ಈಗಾಗಲೇ ಅಸಂಖ್ಯಾತ ಮಂದಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿಗೊಳಗಾಗಿದ್ದು, ಈ ಸಾಲಿಗೆ ರವೀಂದ್ರ ಜಡೇಜಾ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಸದ್ಯ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಜಡ್ಡು, ತಾವು ಉಳಿದುಕೊಂಡಿರುವ ಹೋಟೆಲ್ ಹೊರಭಾಗದಲ್ಲಿ ಸೈಕಲ್ ತುಳಿಯುತ್ತಿರುವ ಫೋಟೋವೊಂದನ್ನು ಟ್ವೀಟ್ ಮಾಡಿ, ತಾವು ನರೇಂದ್ರ ಮೋದಿಯಿಂದ ಸ್ಫೂರ್ತಿಗೊಂಡಿರುವುದಾಗಿ ಬರೆದಿದ್ದಾರೆ. ಇತ್ತೀಚೆಗೆ ನೆದರ್‌ಲೆಂಡ್ ಪ್ರವಾಸದ ವೇಳೆ ಮೋದಿ, ಸೈಕಲ್ ತುಳಿದಿದ್ದು ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿತ್ತು. ಒಂದು ಕಡೆ ತಾವು ಸೈಕಲ್ ತುಳಿಯುತ್ತಿರುವ ಫೋಟೊ ಮತ್ತೊಂದು ಕಡೆ ಮೋದಿ ಅವರು ಸೈಕಲ್ ತುಳಿಯುತ್ತಿರುವ ಫೋಟೊ ಸಂಯೋಜಿಸಿ ಜಡೇಜಾ ಟ್ವೀಟ್ ಮಾಡಿದ್ದಾರೆ.
