Asianet Suvarna News Asianet Suvarna News

ದೇಶದ 100ನೇ ಏರ್’ಪೋರ್ಟ್ ಆರಂಭ

‘ಸ್ವಾತಂತ್ರ್ಯಾನಂತರ 2014ರವರೆಗೆ ದೇಶದಲ್ಲಿ ಕೇವಲ 65 ವಿಮಾನ ನಿಲ್ದಾಣಗಳು ಇದ್ದವು. ಆದರೆ ಕಳೆದ 4 ವರ್ಷಗಳಲ್ಲಿ 35 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಈ ಮುನ್ನ ವರ್ಷಕ್ಕೆ ಸರಾಸರಿ 1 ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿತ್ತು. ಈಗ ಈ ಸರಾಸರಿ 9ಕ್ಕೇರಿದೆ’ ಎಂದು ಅವರು ಹೇಳಿಕೊಂಡರು.

PM Narendra Modi inaugurates 100th airport in Sikkim
Author
Pakyong, First Published Sep 25, 2018, 8:21 AM IST
  • Facebook
  • Twitter
  • Whatsapp

ಪೇಕಾಂಗ್ (ಸಿಕ್ಕಿಂ): ಈಶಾನ್ಯದ ಗುಡ್ಡಗಾಡು ರಾಜ್ಯ ಸಿಕ್ಕಿಂನ ಮೊತ್ತಮೊದಲ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಅವರು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ‘ಹಿಂದಿನ ಸರ್ಕಾರಗಳು ಅಭಿವೃದ್ದಿಯಲ್ಲಿ ಆಮೆ ಗತಿ ಹೊಂದಿದ್ದವು’ ಎಂದು ಟೀಕಿಸಿದರು. ಸಿಕ್ಕಿಂ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ ದೇಶವು 100 ವಿಮಾನ ನಿಲ್ದಾಣಗಳನ್ನು ಹೊಂದಿದಂತಾಗಿದೆ ಎಂದು ಪ್ರಧಾನಿ ಇದೇ ವೇಳೆ ಹರ್ಷಿಸಿದರು.

‘ಸ್ವಾತಂತ್ರ್ಯಾನಂತರ 2014ರವರೆಗೆ ದೇಶದಲ್ಲಿ ಕೇವಲ 65 ವಿಮಾನ ನಿಲ್ದಾಣಗಳು ಇದ್ದವು. ಆದರೆ ಕಳೆದ 4 ವರ್ಷಗಳಲ್ಲಿ 35 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಈ ಮುನ್ನ ವರ್ಷಕ್ಕೆ ಸರಾಸರಿ 1 ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿತ್ತು. ಈಗ ಈ ಸರಾಸರಿ 9ಕ್ಕೇರಿದೆ’ ಎಂದು ಅವರು ಹೇಳಿಕೊಂಡರು. ಕಳೆದ 70 ವರ್ಷಗಳಲ್ಲಿ ದೇಶ 400 ವಿಮಾನಗಳನ್ನು ಹೊಂದಿದ್ದರೆ, ಈಗ ಒಂದೇ ವರ್ಷದಲ್ಲಿ ವಿಮಾನ ಕಂಪನಿಗಳು 1000 ವಿಮಾನಗಳನ್ನು ಆರ್ಡರ್ ಮಾಡಿವೆ ಎಂದು ಅವರು ತಿಳಿಸಿದರು. 

‘ಹವಾಯಿ ಚಪ್ಪಲಿ ಹಾಕಿಕೊಂಡವರೂ ಹವಾಯಿ ಜಹಾಜ್ (ವಿಮಾನ) ಯಾನ ಮಾಡಬೇಕು ಎಂಬುದು ನಮ್ಮ ಸರ್ಕಾರದ ಯತ್ನ. ಈಶಾನ್ಯ ರಾಜ್ಯಗಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು’ ಎಂದರು.

Follow Us:
Download App:
  • android
  • ios