ನವದೆಹಲಿ[ಡಿ.03] ಮೋದಿ ಅವರ ಹಿಂದುತ್ವದ ಬಗ್ಗೆ ಹಿಂದೊಮ್ಮೆ ಪ್ರಶ್ನೆ ಮಾಡಿದ್ದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಸರಿಯಾದ ಸಮಯದಲ್ಲಿ ತಿರುಗೇಟು ನೀಡಿದ್ದಾರೆ.

ಹಿಂದುತ್ವದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಮಾನ್ಯ ಮನುಷ್ಯರಿಗೆ ಸಾಧ್ಯವಿಲ್ಲ. ಸಾಧುಗಳು, ಋಷಿ ಮುನಿಗಳಿಗೂ ಇದನ್ನು ಸಂಪೂರ್ಣ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ  ಎಂದು ರಾಹುಲ್‌ಗೆ ಕಟುಕಿದರು. ಮೋದಿಯವರ ಈ ವಾಗ್ದಾಳಿಗೆ ಸಾಕ್ಷಿಯಾಗಿದ್ದು  ರಾಜಸ್ಥಾನದ ಜೋಧಪುರದ ಚುನಾವಣಾ ಪ್ರಚಾರ ಸಮಾವೇಶ.

ರಾಹುಲ್ ಗಾಂಧಿ ಹೆಸರು ಹೇಳದೆ ಒಂದರ ಮೇಲೊಂದು ಏಟು ನೀಡುತ್ತಲೇ ಹೋದ ಮೋದಿ,, ನಾನೊಬ್ಬ ಸಾಮಾನ್ಯ ಮನುಷ್ಯ..ಜ್ಞಾನಿಗಳಿಗೆ ಮಾತ್ರ ಹಿಂದುತ್ವದ ಅರಿವಿರುತ್ತದೆ. ಕೆಲವರಿಗೆ ಚುನಾವಣೆ ಸಂದರ್ಭ ಬಂದಾಗ ಮಾತ್ರ ಹಿಂದುತ್ವ ನೆನಪಾಗುತ್ತದೆ ಎಂದು ತಮ್ಮ ಭಾಷಣದ ಉದ್ದಕ್ಕೂ ಹೆಸರು ಹೇಳದೆಯೇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡರು.