Asianet Suvarna News Asianet Suvarna News

ನೌಕಾಸೇನೆಗೆ ಮತ್ತೊಂದು ಆನೆ ಬಲ; ದೇಶದ ಹೆಮ್ಮೆ INS ಕಲ್ವಾರಿ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ದೇಶೀ ನೀರ್ಮಿತ INS ಕಲಾವರಿ ಸಬ್ ಮರಿನ್'ನನ್ನು ಮುಂಬೈನಲ್ಲಿಂದು ಲೋಕರ್ಪಣೆಗೊಳಿಸಿದ್ದಾರೆ. ಇದರಿಂದ ನೌಕಾಸೇನೆಗೆ ಮತ್ತೊಂದು ಆನೆ ಬಲ ಬಂದಂತಾಗಿದೆ.  

PM Narendra Modi commissions INS Kalvari India deadliest submarine

ನವದೆಹಲಿ (ಡಿ.14): ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ದೇಶೀ ನೀರ್ಮಿತ INS ಕಲಾವರಿ ಸಬ್ ಮರಿನ್'ನನ್ನು ಮುಂಬೈನಲ್ಲಿಂದು ಲೋಕರ್ಪಣೆಗೊಳಿಸಿದ್ದಾರೆ. ಇದರಿಂದ ನೌಕಾಸೇನೆಗೆ ಮತ್ತೊಂದು ಆನೆ ಬಲ ಬಂದಂತಾಗಿದೆ.  

ಫ್ರಾನ್ಸ್ ಸಹಯೋಗದಲ್ಲಿ ಮುಂಬೈ ಮೂಲದ ಎಂಡಿಎಲ್ ಎನ್ನುವ ಕಂಪನಿ ಈ ಸಬ್ ಮರೀನನ್ನು ನಿರ್ಮಿಸಿದೆ. ಸಬ್ ಮರೀನನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಐಎನ್'ಎಸ್ ಕಲ್ವಾರಿ ನಿರ್ಮಾಣದಲ್ಲಿ ಭಾಗಿಯಾದ ಎಲ್ಲಾ ಕೆಲಸಗಾರರಿಗೂ ನನ್ನ ಧನ್ಯವಾದಗಳು. ಅದೇ ರೀತಿ ನಮಗೆ ಸಂಪೂರ್ಣ ಸಹಕಾರ ನೀಡಿದ ಫ್ರಾನ್ಸ್'ಗೂ ಕೂಡಾ ಕೃತಜ್ಞತೆಗಳು. ಭಾರತ-ಫ್ರಾನ್ಸ್ ನಡುವಿನ ಸಹಭಾಗಿತ್ವ ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವುದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದ್ದಾರೆ.

ಇಂದು ನಮ್ಮ ಪಾಲಿಗೆ ಸುದಿನ. ಇಂತಹದ್ದೊಂದು ಐತಿಹಾಸಿಕ ದಿನದಂದು ದೇಶದ ಎಲ್ಲಾ ನಾಗರೀಕರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ರಾಜ್ಯಪಾಲ ವಿದ್ಯಾ ಸಾಗರ್ ರಾವ್ ಭಾಗಿಯಾಗಿದ್ದರು.

Follow Us:
Download App:
  • android
  • ios