ಭಾರತ ಮತ್ತು ರಷ್ಯಾ ನಡುವಿನ ಅನ್ಯೋನ್ಯ ಸಂಬಂಧಕ್ಕೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್’ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನವದೆಹಲಿ (ಜೂ.02): ಭಾರತ ಮತ್ತು ರಷ್ಯಾ ನಡುವಿನ ಅನ್ಯೋನ್ಯ ಸಂಬಂಧಕ್ಕೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್’ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸೆಂಟ್ ಪೀಟರ್ಸ್ ಬರ್ಗ್ ಅಂತರಾಷ್ಟ್ರೀಯ ಎಕನಾಮಿಕ್ ಫೋರಂ 2017 ರಲ್ಲಿ ಭಾಗವಹಿಸಿ, ಭಾರತ ಮತ್ತು ರಷ್ಯಾ 70 ವರ್ಷಗಳ ಭಾಂಧವ್ಯವನ್ನು ಪೂರೈಸಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ನಿಮ್ಮ ಮಧ್ಯೆ ನಿಂತು ಮಾತನಾಡುತ್ತಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ. ಭಾರತ-ರಷ್ಯಾ ಸಂಬಂಧ ಪ್ರಯೋಜನವಾದವಲ್ಲ. ಮುಂಬರುವ ದಿನಗಳಲ್ಲಿ ನಮ್ಮ ಭಾಂಧವ್ಯ ಇನ್ನಷ್ಟು ಬಲವಾಗಲಿದೆ ಎಂದು ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಭರಪೂರ ಅವಕಾಶಗಳಿವೆ. ಅಲ್ಲಿಗೆ ಬಂದು ಬಂಡವಾಳ ಹೂಡಿಕೆ ಮಾಡಿ. ಆರೋಗ್ಯ ಕ್ಷೇತ್ರದಲ್ಲಿ, ರಕ್ಷಣಾ ಕ್ಷೇತ್ರದಲ್ಲಿ, ಸೇವಾ ವಲಯದಲ್ಲಿ ಭಾರೀ ಅವಕಾಶಗಳಿವೆ. 125 ಕೋಟಿ ಭಾರತೀಯರು ನಿಮ್ಮನ್ನು ಆಹ್ವಾನಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
