ಎರಡೂ ದೇಶಗಳ ಬಾಂಧವ್ಯಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸಿದದ ಪ್ರದಾನಿ ನರೇಂದ್ರ ಮೋದಿ, ಭಾರತ-ಬಾಂಗ್ಲಾದೇಶಗಳ ಸಂಸ್ಕೃತಿ ಹಾಗೂ ಸಾರ್ವಜನಿಕ ನೀತಿಗಳಲ್ಲಿ ಹೆಚ್ಚು ಸಾಮ್ಯತೆಗಳಿವೆ. 

ಕೋಲ್ಕತ್ತಾ(ಮೇ.25): ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾ ಭೇಟಿ ಸಂದರ್ಭದಲ್ಲಿ ಒಂದು ತಮಾಷೆಯ ಪ್ರಸಂಗ ನಡೆಯಿತು.
ವಿಶ್ವಭಾರತಿ ವಿವಿಯ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಶಾಂತಿನಿಕೇತನಕ್ಕೆ ಹೆಲಿಕಾಪ್ಟರ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದಾಗ ಸಂಪ್ರದಾಯದಂತೆ ಅವರನ್ನು ಸ್ವಾಗತಿಸಲು ಅನತಿ ದೂರದಿಂದ ಆಗಮಿಸಲು ಬರುತ್ತಿದ್ದಾಗ ಮೋದಿ ಸಮೀಪ ಕೆಸರಿದ್ದ ಕಾರಣ ಇತ್ತಕಡೆಯಿಂದ ಬನ್ನಿ ಎಂದು ಮಮತಾ ಅವರಿಗೆ ಸನ್ನೆ ಮಾಡಿದರು.
ಈ ದೃಶ್ಯ ವೈರಲ್ ಆಗುತ್ತಿದ್ದು ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸರಿದಾರಿಯಲ್ಲಿ ಬನ್ನಿ ಎಂಬುದಾಗಿ ತಿಳಿಹೇಳುವಂತಿದೆ. ಎರಡೂ ದೇಶಗಳ ಬಾಂಧವ್ಯಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸಿದದ ಪ್ರದಾನಿ ನರೇಂದ್ರ ಮೋದಿ, ಭಾರತ-ಬಾಂಗ್ಲಾದೇಶಗಳ ಸಂಸ್ಕೃತಿ ಹಾಗೂ ಸಾರ್ವಜನಿಕ ನೀತಿಗಳಲ್ಲಿ ಹೆಚ್ಚು ಸಾಮ್ಯತೆಗಳಿವೆ. ಎರಡೂ ದೇಶಗಳ ಜನರು ಪರಸ್ಪರ ಒಬ್ಬರಿಗೊಬ್ಬರು ಕಲಿಯುವುದು ಸಾಕಷ್ಟಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ವಿವಿಯಲ್ಲಿರುವ ಬಾಂಗ್ಲಾದೇಶ ಭವನ ಎಂದು ತಿಳಿಸಿದರು.
ಇದೇ ಸಮಾರಂಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಕೂಡ ಭಾಗವಹಿಸಿದ್ದರು.

Scroll to load tweet…